Jump to content

Page:ತುಳುನಾಡಿನಲ್ಲಿ ಬಾಸೆಲ್ ಮಿಶನ್ ಮತ್ತಿತರ ಲೇಖನಗಳು.pdf/113

From Wikisource
This page has been proofread.

ಕೆಯಾದ ಸಂಸ್ಥೆಯು ಮುಚ್ಚಿದ್ದರಿಂದ ಬಲ್ಮಠದಲ್ಲಿರುವ ಹಲವು ಸಹೃದಯರು ಸೇರಿ ಹಲವು ಬಾರಿ ಚರ್ಚಿಸಿ ಯಾಕೆ ಮಂಗಳೂರಿನಲ್ಲಿ ಬಾಸೆಲ್ ಮಿಶನ್ ಕಾರ್ಖಾನೆಗಳಲ್ಲಿ ಸೇವೆ ಸಲ್ಲಿಸುತ್ತಿದ್ದ ನಾವೆಲ್ಲರೂ ಸೇರಿ ಒಂದು ಸಹಕಾರ ಸಂಘವನ್ನು ಸ್ಥಾಪಿಸಬಾರದೆಂಬ ನಿರ್ಧಾರಕ್ಕೆ ಬಂದರು. ಹಲವರ ಪ್ರಯತ್ನದಿಂದ ಈ ಸಂಘ ಸ್ಥಾಪನೆಯ ರೂಪುರೇಖೆಗಳನ್ನು ನಿರ್ಮಿಸಿ ಈ ಸಂಘಕ್ಕೆ “ಮಂಗಳೂರು ಕೈಗಾರಿಕ ಕೆಲಸಗಾರರ ಸಹಕಾರ ಸಂಘ' ಎಂಬ ಹೆಸರಿನಿಂದ 6-12-1957ರಲ್ಲಿ ಸರಕಾರದಿಂದ ನೊಂದಣಿ ಮಾಡಲಾಯಿತು.

ಸರಕಾರದ ಸಣ್ಣ ಕೈಗಾರಿಕಾ ಘಟಕದ ಜೊತೆ ನಿರ್ದೇಶಕರು ಬಲ್ಮಕೋ ಸಂಸ್ಥೆಯ ಕಾರ್ಯಚಟುವಟಿಕೆಗಳನ್ನು ಪರಿಶೀಲಿಸಿ ಅಧಿಕೃತವಾಗಿದೆ ಎಂದು ಘೋಷಿಸಿದ್ದರಿಂದ ಸಿದ್ದ ಉಡುಪು ತಯಾರಿಕೆಯ ಘಟಕಕ್ಕೆ ಹುರುಪನ್ನು ತಂದು ಕೊಟ್ಟಿತು. ಕಾಮನ್‌ವೆಲ್ತ್ ಹೊಸೈರಿಯಲ್ಲಿ ಸೇವೆ ಸಲ್ಲಿಸಿ ರಾಜಿನಾಮೆ ಕೊಟ್ಟಿರುವ ಕೆಲವರ ಸಹಾಯದಿಂದ ಘಟಕಕ್ಕೆ ಬೇಕಾದ ತಯಾರಿಗಳು ನಡೆದು ಕೆಲಂಡರಿಂಗ್‌, ಓವರ್‌ಲಾಕ್, ಟೈಟಿಂಗ್ ಮೆಷಿನ್‌ಗಳು ಬಂದು ಪ್ರಾಯೋಗಿಕ ಉತ್ಪನ್ನಗಳ ತಯಾರು ಆರಂಭವಾಯಿತು. 1961ರಿಂದ ಕ್ರಮಪ್ರಕಾರವಾಗಿ ಬಲ್ಮಕೋ ಉತ್ಪನ್ನಗಳು ಮಾರುಕಟ್ಟೆಗೆ ಬಿಡುಗಡೆಯಾಯಿತು. 1965ರಲ್ಲಿ ಕಾಮನ್‌ವೆಲ್ತ್ ಕಾರ್ಖಾನೆ ಮತ್ತು ತಿರುಪುರ, ಲೂಧಿಯಾನದಿಂದ ಬಟ್ಟೆಗಳನ್ನು ಪಡೆದುಕೊಳ್ಳುತ್ತಿತ್ತು. ಕಾಮನ್‌ವೆಲ್ತ್ ಘಟಕ ಮುಚ್ಚುವ ತನಕ ಫೀಚ್ ಆಗುತ್ತಿದ್ದ ಬಟ್ಟೆಗಳೇ ಇಲ್ಲಿ ಸಿಗುತ್ತಿದ್ದವು. ಅನಂತರ ಬೇರೆ ಕಡೆಗಳಿಂದ ಬಟ್ಟೆಗಳನ್ನು ತರಿಸಲಾಗುತ್ತಿದ್ದು ಸಂಘದಲ್ಲಿ ಭೀಚಿಂಗ್ ವ್ಯವಸ್ಥೆ ಇಲ್ಲದ್ದರಿಂದ ತಿರುಪುರಕ್ಕೆ ಕಳುಹಿಸಿ ಬೀಚ್ ಮಾಡಿಸಿ ತರಲಾಗುತ್ತಿತ್ತು.

1967 ರಿಂದ ಹಲವು ವರ್ಷಗಳ ಕಾಲ ನೆಹರೂ ಮೈದಾನದಲ್ಲಿ ಡಿಸೆಂಬರ್- ಜನವರಿಯಲ್ಲಿ 20 ದಿವಸಗಳ ಕಾಲ ನಡೆಯುತ್ತಿದ್ದ ಅಖಿಲ ಭಾರತ ಕೈಗಾರಿಕೆ ಮತ್ತು ಕೃಷಿ ಪ್ರದರ್ಶನದಲ್ಲಿ ಸ್ಟಾಲ್ ಹಾಕಿ ಉತ್ಪನ್ನಗಳನ್ನು ಮಾರಾಟ ಮಾಡಲಾಗುತ್ತಿತ್ತು. 1969 ರಲ್ಲಿ ಕಾಮನ್‌ವೆಲ್ತ್ ಸಂಸ್ಥೆ ಮುಚ್ಚಿದ್ದು ಅದರಲ್ಲಿದ್ದ ಫೆಬ್ರಿಕ್ಸ್‌ಗಳನ್ನೂ, ನಿಟ್ಟಿಂಗ್ ಮೆಷಿನ್‌ಗಳನ್ನೂ ಕ್ರಯಕ್ಕೆ ಪಡೆದುಕೊಳ್ಳಲಾಗಿತ್ತು ಮಾತ್ರವಲ್ಲದೆ ಅಲ್ಲಿ ಸೇವೆಯಲ್ಲಿದ್ದ ಇಬ್ಬರು ನೌಕರರು ಇಲ್ಲಿ ಸೇವೆಗೆ ಸೇರಿದರು. 1957ರಲ್ಲಿ 27 ಪಾಲು ಬಂಡವಾಳದಾರರನ್ನು ಹೊಂದಿ ಸ್ಥಾಪನೆಯಾದ ಈ ಸಂಸ್ಥೆಗೆ 60 ಸಂವತ್ಸರಗಳು ತುಂಬಿವೆ. ಪ್ರಸ್ತುತ 300 ಪಾಲು ಬಂಡವಾಳದಾರರು ಇದ್ದಾರೆ. ಏಳು ಬೀಳುಗಳ ಮಧ್ಯೆ 60 ವರ್ಷಗಳಲ್ಲಿ ಹಲವಾರು ಮಹಿಳೆಯರು,

ತುಳುನಾಡಿನಲ್ಲಿ ಬಾಸೆಲ್ ಮಿಶನ್ ಮತ್ತಿತರ ಲೇಖನಗಳು...

101