ನಿನ ಆಶೀರ್ವಾದೊನು, ದಯ ಮಳ್ ಕೊರೊಡು
ಯೆಂಕ್ ಸಂಪು ನಿದ್ರೆನ್, ಕೊರ್ಲ ಇಡೀ ರಾತ್ರೆಡ್
ನಿನ ದೂತ ಸೈನ್ಯೂನು, ದೀಲ ಯೆನ ಸೂತೊಗು.
ತುಳು ಕ್ರೈಸ್ತರು ವಿದೇಶಿ ಶೈಲಿಯ ತುಳು ಸಂಗೀತಗಳನ್ನು ಮನೆ,
ದೇವಾಲಯಗಳಲ್ಲಿ ಹಾಡುವುದಲ್ಲದೆ ತುಳುವಿನಲ್ಲಿ ಹಲವಾರು ಮಕ್ಕಳ ಸಂಗೀತಗಳು,ದೇಶೀಯ ಶೈಲಿಯ ಹಾಡುಗಳು ಬಳಕೆಯಲ್ಲಿದೆ. ಮದ್ರಾಸ್‌ನ ಫೀಬಾ ರೇಡಿಯೊ ಸಂಸ್ಥೆಯಲ್ಲಿ ಡಾ. ಹನಿ ಕಬ್ರಾಲ್ ನಾಯಕತ್ವದಲ್ಲಿ ಜೀವದ ಸಾದಿ, ಜೀವದ ಬೊಳ್ಪ್ಪು ಎಂಬ 15 ನಿಮಿಷಗಳ ತುಳು ಕಾರ್ಯಕ್ರಮಗಳು 8 ವರ್ಷಗಳ ಕಾಲ ಪ್ರಸಾರವಾಗಿದ್ದು ಇದರಿಂದ ಕೊಂಡಾಡುಲೆ ಹಾಗೂ ಮೇಪುನಾಯನ ಸ್ವರ ಎಂಬ 24 ದೇಶೀಯ ಶೈಲಿಯ ಹಾಡುಗಳನ್ನೊಳಗೊಂಡ ಎರಡು ಕ್ಯಾಸೆಟ್‌ಗಳು ಬಿಡುಗಡೆಯಾಗಿತ್ತು. ಈ ಹಾಡುಗಳನ್ನು ಡಾ. ಹನಿ ಕಾಲ್, ರೆವೆ. ಮೋಸೆಸ್ ಪ್ರಭಾಕರ್, ಶ್ರೀ ರೋಶನ್ ಜತ್ತನ್ನೇ ರಚಿಸಿದ್ದಾರೆ. ವಿಶ್ವವಾಣಿ ಎಂಬ ಸಂಸ್ಥೆಯಿಂದ 'ಜೀವದ ಒಸರ್ ಎಂಬ ತುಳು ಕಾರ್ಯಕ್ರಮ ಒಂದು ವರ್ಷಗಳ ಕಾಲ ಪ್ರಸಾರವಾಗಿತ್ತು. ಪ್ರಸ್ತುತ
ಟ್ರಾನ್ಸ್ ವರ್ಲ್ಡ್ ರೇಡಿಯೋ ಸಂಸ್ಥೆ ವತಿಯಿಂದ 'ಬೊಳ್ಪುದ ಜೀವನ' ಹಾಗೂ
'ದೇವರೆ ಪಾತೆರ' ಎಂಬ ನೀತಿ ಬೋಧೆಗಳನ್ನು ತಿಳಿಸುವ ಎರಡು ತುಳು
ಕಾರ್ಯಕ್ರಮಗಳು ಶ್ರೀಲಂಕಾ ರೇಡಿಯೋ ಕೇಂದ್ರದಿಂದ ವಾರಕ್ಕೆರಡು ಬಾರಿ
ಪ್ರಸಾರವಾಗುತ್ತಿದೆ. ಇದರ ನಾಯಕತ್ವವನ್ನು ಶ್ರೀಯುತ ಆಂಡ್ರಸ್ ಸುಧಾಕರ್
ವಹಿಸಿದ್ದು ಇದೇ ಸಂಸ್ಥೆಯಿಂದ 'ಬೊಳ್ಪುದ ಜೀವನ' ಎಂಬ 9 ತುಳು ದೇಶೀ
ಶೈಲಿಗಳನ್ನೊಳಗೊಂಡ ಹಾಡುಗಳಿದ್ದು ಇದನ್ನು ಶ್ರೀ ಆಂಡ್ರಸ್ ಸುಧಾಕರ್ ಹಾಗೂ
ರೆವೆ. ಮೋಸೆಸ್ ಪ್ರಭಾಕರ್ ತರ್ಜುಮೆಗೊಳಿಸಿ ರಚಿಸಿದ್ದು ಈ ಹಾಡುಗಳು
ಬಳಕೆಯಲ್ಲಿವೆ. ಪ್ರಸ್ತುತ ದೂರದರ್ಶನದ ಬಿಗ್ ಜೆ, ಛಾನೆಲ್‌ನಲ್ಲಿ ಬೊಳ್ಪುದ ಜೀವನ
ಎಂಬ ತುಳು ಕಾರ್ಯಕ್ರಮ ವಾರಕ್ಕೊಮ್ಮೆ ಪ್ರಸಾರವಾಗುತ್ತಿದೆ. ಕ್ರೈಸ್ತರಲ್ಲಿ ಸಂಗೀತ,
ನಾಟಕ, ಮಾದ್ಯಮ, ಸಿನೆಮಾಗಳಲ್ಲಿ ತಮ್ಮನ್ನು ತೊಡಗಿಸಿಕೊಂಡವರಿದ್ದಾರೆ. ಈಗಲೂ
ಕ್ರೈಸ್ತ ಸಮಾಜದಲ್ಲಿ ತುಳುವಿನಲ್ಲಿ ಹೊಸ ಹೊಸ ಹಾಡುಗಳು ರಚನೆಯಾಗಿ
ಬಳಕೆಯಾಗುತ್ತಾ ಇದೆ. ಉಚ್ಚಿಲದ ಬಿ.ಎಸ್. ರಾವ್ ಎಂಬವರು ತುಳುವಿನ ಸಣ್ಣ ಸಣ್ಣ ಕೋರಸ್‌ಗಳ(ಹಾಡುಗಳ) ಕ್ಯಾಸೆಟ್ ತಯಾರಿಸಿದ್ದರು. ಇವುಗಳಲ್ಲಿ ಇಂತಹ ಹಾಡುಗಳಿದ್ದವು.
ಅಮ್ಮೆರೆನ ಇಲ್ಲಡೆ ಪೋದು ಬಲ್ಲ, ಅಷ್ಟೊಡು ಉಂಡ ತೂಲ ವಾಲೆ ಬೆಲ್ಲ ಬಂಜಾರ ನೀರ್ ಪರ್ ಕಾತ್ ಕುಲ್ಲ, ಪಾರೊಂದು ಬರೆ ನಿನ್ನ ಅಮ್ಮೆ ತೂಲ
ತುಳುನಾಡಿನಲ್ಲಿ ಬಾಸೆಲ್ ಮಿಷನ್ ಮತ್ತಿತರ ಲೇಖನಗಳು...
117