Jump to content

Page:ತುಳುನಾಡಿನಲ್ಲಿ ಬಾಸೆಲ್ ಮಿಶನ್ ಮತ್ತಿತರ ಲೇಖನಗಳು.pdf/131

From Wikisource
This page has been proofread.

ವಾಸಿಸುತ್ತಿರುವವರಲ್ಲಿ ನಾವು ನೋಡಬಹುದು. ಪೇಟೆಯಲ್ಲಿ ಸ್ವಲ್ಪ ಕನ್ನಡ ಹೆಚ್ಚು ಬಳಕೆಯಾದರೂ ಹಳ್ಳಿಗಳಲ್ಲಿ ಅವರು ತುಳುವರೇ ಅನಿಸುತ್ತಿದೆ. ತುಳು ಜಿಲ್ಲೆಯಲ್ಲಿ ಎಲ್ಲಿ ಕಂಬಳವಾದರೂ ಅಲ್ಲಿ ಒಂದೆರಡು ಜೊತೆ ಕೆಥೋಲಿಕ ಕ್ರೈಸ್ತರ ಎತ್ತುಗಳು ಸ್ಪರ್ಧೆಗಾಗಿ ನೀರಿಗಿಳಿಯುದನ್ನು ನಾವು ನೋಡಬಹುದು.

ತುಳು ಸಂಗೀತ ಕ್ಷೇತ್ರದಲ್ಲಿ ಕೆಥೋಲಿಕ ಕ್ರೈಸ್ತರಾದ ಎಲ್ಪಿ ರೆಮಿಂಬಸ್, ಮೆಲ್ವಿನ್ ಪೆರಿಸ್, ಎರಿಕ್ ಒಸಾರಿಯೋ ಮುಂತಾದ ಮಹನೀಯರು ಸಂಗೀತ ಕ್ಷೇತ್ರದಲ್ಲಿದ್ದು ತುಳು ಪದ್ಯಗಳನ್ನು ರಚಿಸಿ ಹಲವಾರು ಕ್ಯಾಸೆಟ್‌ಗಳನ್ನು ಹೊರತಂದಿದ್ದಾರೆ.

ಮಾಮಿನ ಇಲ್ಲಡೆ ಪೋದು ಬರ್ಕ, ಕೈಪೆ ಕಾಪಿ ಕೊಂರ್ಡ ಬೊಡ್ಡಿ ಪನ್ಕ
ಪೇರ್ ಕೂಟು ಕೊಂರ್ಡ ಒಯಿತ್ ಪರ್ಕ, ನಮ ಮಾಮಿನ ತಮ್ಮಣ.

ಇಂತಹ ತುಳುವಿನೊಂದಿಗೆ ಗೋವಾ ಪೊಲ್ಕ ಶೈಲಿಯಲ್ಲಿ ಹಲವಾರು ಹಾಡುಗಳು ತುಳು ಜಿಲ್ಲೆಯಾದ್ಯಂತ ಪ್ರತಿಯೋರ್ವರ ನೆನಪಿನಲ್ಲಿ ಇದೆ. ಹೀಗೆ ತುಳು ಜಿಲ್ಲೆಗಳಲ್ಲಿ ವಾಸಿಸುತ್ತಿರುವ ಹಾಗೂ ಪರದೇಶಗಳಲ್ಲಿ ವಾಸಿಸುತ್ತಿರುವ ತುಳು ಕ್ರೈಸ್ತರಾದ ಪ್ರೊಟೆಸ್ಟಂಟ್ ಕ್ರೈಸ್ತರು ಹಾಗೂ ಕೆಥೋಲಿಕ ಕ್ರೈಸ್ತರು ತುಳು ಬಿಡುವವರಲ್ಲ, ಬಿಟ್ಟದ್ದೂ ಇಲ್ಲ. ತುಳು ಮಣ್ಣಿನ ಮಕ್ಕಳಾಗಿ, ತುಳುವಿನ ಸಂಸ್ಕೃತಿ, ಕಂಬಳ, ಕೋಳಿ ಅಂಕ, ಎಲ್ಲದರಲ್ಲಿಯೂ ಭಾಗವಹಿಸುತ್ತಿದ್ದು ನಾವೆಲ್ಲರೂ ತುಳು ತಾಯಿಯ ಮಕ್ಕಳೇ ಎಂಬಂತೆ ಜೀವನ ಸಾಗಿಸುತ್ತಿರುವುದು ತುಳು ಅಪ್ಪೆಗೆ ಹೆಮ್ಮೆಯ ವಿಚಾರ.

ತುಳುನಾಡಿನಲ್ಲಿ ಬಾಸೆಲ್ ಮಿಶನ್ ಮತ್ತಿತರ ಲೇಖನಗಳು...

119