Jump to content

Page:ತುಳುನಾಡಿನಲ್ಲಿ ಬಾಸೆಲ್ ಮಿಶನ್ ಮತ್ತಿತರ ಲೇಖನಗಳು.pdf/149

From Wikisource
This page has been proofread.

(ಮುಂಬಯಿ ಇಲಾಖೆಯೊಳಗಿನ ಸರಕಾರದ ವಿದ್ಯಾಖಾತೆ, ಕನ್ನಡ ಆರನೇ ಪುಸ್ತಕ, ವರ್ನಾಕ್ಯುಲರ್ ಟೆಸ್ಟ್ ಬುಕ್ಸ್ ಕಮಿಟಿಯಿಂದ ರಚಿತವಾದ್ದು, ಪ್ರಕಾಶಕರು: R.N.Datar & Sons, Publishers, Poona City, 1927, Printed at the Kanarese Mission Press and Book Depot, Mangalore.)

ದ್ರಾವಿಡರೂ ಅರ್ಯರೂ: ಈ ಮೂಲ ನಿವಾಸಿಗಳನ್ನು ಗುಡ್ಡಬೆಟ್ಟಗಳಿಗೆ ಓಡಿಸಿ ಮೊದಲು ಹಿಂದುಸ್ಥಾನಕ್ಕೆ ಬಂದವರು ಈ ಮೂಲನಿವಾಸಿಗಳಿಗಿಂತಲೂ ಸುಧಾರಣೆಯುಳ್ಳವರು. ಅವರಿಗೆ ದ್ರಾವಿಡರೆನ್ನುತ್ತಾರೆ. ಅವರು ಉತ್ತರದಿಂದಲೂ ವಾಯವ್ಯದಿಂದಲೂ ಹಿಂದುಸ್ಥಾನದ ಗಡಿಯಲ್ಲಿರುವ ಕಡಿದಾದ ಬೆಟ್ಟಗಳ ಕಣಿವೆಗಳನ್ನು ದಾಟಿ ಹಿಂದೂದೇಶಕ್ಕೆ ಬಂದರು. ಮೊತ್ತಮೊದಲು ಇವರು ಸಿಂಧೂ- ಗಂಗಾತೀರಗಳಲ್ಲಿ ವಾಸಮಾಡುತ್ತಿದ್ದು ಅನಂತರ ವಿಂಧ್ಯಾಪರ್ವತದ ಉತ್ತರ ಭಾಗದವರೆಗೂ ಹರಡಿಕೊಂಡಿದ್ದರು.

ಇವರು ಹಿಂದೆ ಹೇಳಿದ ಮೂಲನಿವಾಸಿಗಳಿಗಿಂತ ಒಳ್ಳೆಯ ಸ್ಥಿತಿಯಲ್ಲಿ ಜೀವನ ಮಾಡುತ್ತಿದ್ದರು. ನದಿಗಳ ದಡಗಳಲ್ಲಿ ಇರುವ ಕಾಡುಗಳನ್ನು ಕಡಿದು ಬಗೆಬಗೆಯ ಧಾನ್ಯಗಳನ್ನು ಬಿತ್ತಿ ಪೈರು ಮಾಡುತ್ತಿದ್ದರು. ಕೃಷಿ ವ್ಯಾಪಾರ ಇವುಗಳೇ ಇವರ ಮುಖ್ಯ ವೃತ್ತಿ. ಆದರೆ ಶತ್ರುಗಳಿಂದ ತಮ್ಮನ್ನು ಕಾಪಾಡಿಕೊಳ್ಳುವ ಶಸ್ತ್ರಾಸ್ತ್ರ ವಿದ್ಯೆಯು ಇವರಿಗೆ ಬರುತಿತ್ತು. ಇವರ ದ್ರಾವಿಡ ಭಾಷೆಯು ಮುಂದೆ ಹಲವು ವರ್ಷಗಳ ನಂತರ ತಮಿಳು ಎಂದು ಕರೆಯಲ್ಪಟ್ಟಿತು. ತಮಿಳು ಭಾಷೆಗೆ 'ಅರವ ಎಂಬ ಹೆಸರೂ ಉಂಟು.

ಸಾವಿರಾರು ವರ್ಷಗಳ ನಂತರ ಇದೇ ಕಣಿವೆಗಳ ಮಾರ್ಗವಾಗಿ ಮಧ್ಯ ಆಸ್ಯದಿಂದ ಇನ್ನೊಂದು ಜನಾಂಗವು ಹಿಂದುಸ್ಥಾನದೊಳಕ್ಕೆ ಕಾಲಿಟ್ಟಿತು. ಇವರು ಆರ್ಯರೆಂದು ಕರೆದುಕೊಳ್ಳುತಿದ್ದರು. ಆರ್ಯರೆಂದರೆ, ಸುಧಾರಣೆಯುಳ್ಳ ಶಿಷ್ಯ ಜನರು ಎಂಬರ್ಥ. ಇವರು ಆಡುವ ಭಾಷೆ ಸಂಸ್ಕೃತ. ಸಂಸ್ಕೃತವೆಂದರೆ, ಚೆನ್ನಾಗಿ ರಚಿತವಾದ ಭಾಷೆ.

ಆರ್ಯರು ತಂಡ ತಂಡವಾಗಿ ಹಿಂದೂದೇಶಕ್ಕೆ ಬರುತ್ತಿದ್ದ ಹಾಗೆ ದ್ರಾವಿಡರಿಗೆ ಅಲ್ಲಿ ನಿಲ್ಲಲು ನಿಲುಗಾಲವಿಲ್ಲದಾಯಿತು. ಅವರು ಹಿಂದೂ ದೇಶದಲ್ಲಿ ಮಧ್ಯದಲ್ಲಿ ಅಡ್ಡ ಹಾದುಹೋಗುತ್ತಿದ್ದ 'ಮಹಾಕಾಂತಾರ' ಎಂಬ ಕಾಡನ್ನೂ ವಿಂಧ್ಯಾಚಲವನ್ನೂ ನೇರಾಗಿ ದಾಟಲಾರದೆ ಪಶ್ಚಿಮ ಕರಾವಳಿಯ ಸಿಂಧು ಗುಜರಾತು

ತುಳುನಾಡಿನಲ್ಲಿ ಬಾಸೆಲ್ ಮಿಶನ್ ಮತ್ತಿತರ ಲೇಖನಗಳು...

137