ಆರಂಭವಾಯಿತು. ಮಹಿಳಾ ಮಿಶನರಿಗಳು ಕಸೂತಿ ಹೊಲಿಗೆ ಕಲಿಸುವುದರ
ಮೂಲಕ ಹುಡುಗಿಯರನ್ನು ಶಿಕ್ಷಣದೆಡೆಗೆ ಆಕರ್ಷಿಸಿದರು. ಬಾಲ್ಯವಿವಾಹ
ಪ್ರಚಲಿತದಲ್ಲಿದ್ದರಿಂದ, ಮೇಲ್ವರ್ಗದ ಮದುವೆ ಆದ ಹೆಣ್ಮಕ್ಕಳು ಹುಡುಗರ
ಶಾಲೆಯಲ್ಲಿ ಕಲಿಯಲು ಮುಂದೆ ಬಾರದ್ದರಿಂದ 1855ರಲ್ಲಿ ಬ್ರಾಹ್ಮಿನ್‌ಗರ್ಲ್ಸ್ ಶಾಲೆ,
ಉಡುಪಿಯಲ್ಲಿ 1873ರಲ್ಲಿ ಬ್ರಾಹ್ಮಿನ್‌ಗರ್ಲ್ಸ್ ಶಾಲೆ, ಕಾರ್ಕಳದಲ್ಲಿ 1890ರಲ್ಲಿ
ಹುಡುಗಿಯರ ಶಾಲೆ ತೆರೆಯಲಾಯಿತು. ಅನಾಥ ನಿರ್ಗತಿಕ ಮಕ್ಕಳನ್ನು ಗುರುತಿಸಿ
ಅವರಿಗೂ ಶಿಕ್ಷಣದ ವ್ಯವಸ್ಥೆ ಕಲ್ಪಿಸುವಂತೆ 1856ರಲ್ಲಿ ಮುಲ್ಕಿಯಲ್ಲಿ ಬೋರ್ಡಿಂಗ್
ಶಾಲೆ ತೆರೆಯಲಾಗಿ ಅಲ್ಲಿ ಮಕ್ಕಳಿಗೆ ಬೇಸಾಯ, ಅಡಿಗೆ, ಕಸೂತಿ, ಹುರಿಹಗ್ಗ,
ಹೈನುಗಾರಿಕೆ, ನೇಯಿಗೆ, ಗುಡಿ ಕೈಗಾರಿಕೆಗಳನ್ನು ಕಲಿಸಲಾಗುತ್ತಿತ್ತು. ಮೂಡಬಿದ್ರೆಯಲ್ಲಿ
ಪಂಚಮರ ಶಾಲೆ, ಉಜಿರೆಯಲ್ಲಿ ಬೈರರ ಶಾಲೆ, ಪುತ್ತೂರಿನಲ್ಲಿ ಪಂಚಮರ
ಶಾಲೆಗಳನ್ನು ತೆರೆಯಲಾಯಿತು.
ಮಿಶನರಿಗಳು ಸ್ಥಾಪಿಸಿದ ನೇಯಿಗೆ, ಹಂಚು, ಕಾರ್ಖಾನೆಗಳಲ್ಲಿ ಜಾತಿ ಮತ
ಬೇಧವಿಲ್ಲದೆ ಕೆಲಸ ನೀಡುತ್ತಿದ್ದರು. 1844ರಲ್ಲಿ ನೇಯಿಗೆ, 1851ರಲ್ಲಿ ಕೈಮಗ್ಗಗಳ
ಸ್ಥಾಪನೆಗಳಾದವು. ಜಪ್ಪು 1875, ಕುದ್ರೋಳಿ 1882ರಲ್ಲಿ ಹಂಚಿನ ಕಾರ್ಖಾನೆ
ಸ್ಥಾಪನೆಯಾಯಿತು. ಮಹಿಳೆಯರು ಕೆಲಸಕ್ಕೆ ಸೇರುವ ಅವಕಾಶ ಕಲ್ಪಿಸಲಾಯಿತು.
ಕೆಲಸಕ್ಕೆ ಸೇರಿದ ಮಹಿಳೆಯರ ಮಕ್ಕಳನ್ನು ನೋಡಿಕೊಳ್ಳಲು ಕಾರ್ಖಾನೆಗಳಲ್ಲಿಯೇ
ಶಿಶುವಿಹಾರ ಪ್ರಾರಂಭವಾಯಿತು. ಇದು ಮುಂದಕ್ಕೆ ಕಿಂಡರ್ ಗಾರ್ಡನ್
ಶಾಲೆಗಳಾದವು. ಮನೆ ಮನೆಗಳಲ್ಲಿ ಕೈಮಗ್ಗದ ಸ್ಥಾಪನೆಗಳಿಂದ ಮನೆಯ
ಯಜಮಾನ ಮಗ್ಗದಲ್ಲಿ ನೇಯಿಗೆ ಮಾಡಿದರೆ ಹೆಂಡತಿ ನೂಲು ಸುತ್ತುವ ಕೆಲಸ
ಮಾಡಲು ಅನುಕೂಲವಾಯಿತು. ಹೊಲಿಗೆ ತರಬೇತಿಯಿಂದ ಹಲವಾರು
ಮಹಿಳೆಯರು ಮನೆಯಲ್ಲಿಯೇ ಕುಳಿತು ಕಸೂತಿ ಕೆಲಸ ಮಾಡಿ ಸ್ವಾವಲಂಬನೆಗೆ
ತೊಡಗುವಂತಾಯಿತು.
ಶಾಲೆಗಳಲ್ಲಿ ಲಿಂಗಬೇಧವಿಲ್ಲದೆ ಶಿಕ್ಷಣದ ವ್ಯವಸ್ಥೆ ಇತ್ತು. ಒಂದೇ ಬೆಂಚಿನಲ್ಲಿ
ಕುಳಿತುಕೊಳ್ಳುವ ಅವಕಾಶವಿತ್ತು. ಅಸ್ಪೃಶ್ಯತೆಗೆ ಅವಕಾಶವಿರಲಿಲ್ಲ. ಆದರೂ
ಕೆಳವರ್ಗದ ಮಕ್ಕಳು ಶಾಲೆಗೆ ಬರಲು ಹಿಂಜರಿಯುತ್ತಿದ್ದರು. ಅದಕ್ಕಾಗಿಯೇ ಕಾರ್ಕಳ,
ಪುತ್ತೂರು ಕಡೆಗಳಲ್ಲಿ ಪಂಚಮರ ಶಾಲೆ, ಉಜಿರೆಯಲ್ಲಿ ಬೈರರ ಶಾಲೆಗಳನ್ನು
ತೆರೆಯಬೇಕಾಯಿತು.
1918ರಲ್ಲಿ ಬಾಸೆಲ್ ಮಿಶನ್ ಪ್ರೆಸ್‌ನಲ್ಲಿ ಪ್ರಕಟಗೊಂಡ 'ಹೆಣ್ಣು ಮಕ್ಕಳ ಕನ್ನಡ ಮೊದಲನೇ ಪುಸ್ತಕ' ದಲ್ಲಿರುವ ವಿಷಯಗಳು ಹೀಗಿವೆ. ಜೋಕಾಲಿ, ವಸ್ತ್ರದ 144
ತುಳುನಾಡಿನಲ್ಲಿ ಬಾಸೆಲ್ ಮಿಶನ್ ಮತ್ತಿತರ ಲೇಖನಗಳು...