Jump to content

Page:ತುಳುನಾಡಿನಲ್ಲಿ ಬಾಸೆಲ್ ಮಿಶನ್ ಮತ್ತಿತರ ಲೇಖನಗಳು.pdf/165

From Wikisource
This page has been proofread.

ಮೂಡಬಿದ್ರೆ- 1926- ಮೂಡಬಿದ್ರೆಯಲ್ಲಿ ಕೆನರೀಸ್ ಮಿಶನ್‌ ನಿಂದ ಬಾಸೆಲ್ ಮಿಶನ್ ಫಾರ್ಮ್ ಸ್ಥಾಪನೆ. ಉಡುಪಿಯಲ್ಲಿದ್ದ ಕ್ರಿಶ್ಚನ್ ಹೈಸ್ಕೂಲ್ ನ ಪ್ರಥಮ ಉಪಾಧ್ಯಾಯರಾಗಿದ್ದ ಶ್ರೀ ವೆಂಕಟೇಶ ಪ್ರಭುಗಳ ಕುಟುಂಬದವರಿಂದ ರೂ. 275ಕ್ಕೆ ಈ ಸ್ಥಳವನ್ನು ಖರೀದಿಸಲಾಗಿತ್ತು. ರೆವೆ. ಫಿಶರ್‌ರವರ ನಾಯಕತ್ವದಲ್ಲಿ ನೂರಾರು ಎಕ್ರೆ ಸ್ಥಳವನ್ನು ಪಡುಮಾರ್ನಾಡಿನ ಬನ್ನಡ್ಯದಲ್ಲಿ ಖರೀದಿಸಿ ಅಲ್ಲಿ ಬಾಸೆಲ್ ಮಿಶನ್ ಫಾರ್ಮ್ ನಿರ್ಮಿಸಲಾಯಿತು. 1927ರಲ್ಲಿ ಶ್ರೀ ವಿಲಿಯಂ ಸೋನ್ಸ್ (ಎಗ್ರಿಕಲ್ಟರ್ ಡೆಮೊನ್‌ ಸ್ಟೇಟರ್)ರವರ ಸಹಕಾರದೊಂದಿಗೆ ಬರಡಾಗಿದ್ದ ಬನ್ನಡ ಸ್ಥಳವನ್ನು ಕೃಷಿ ಪ್ರಧಾನ ಕ್ಷೇತ್ರವನ್ನಾಗಿ ಮಾಡಲಾಯಿತು. ಸಾವಿರ ತೆಂಗಿನ ಮರಗಳನ್ನು ನೆಡಲಾಯಿತು. ನೀರಾವರಿ ವ್ಯವಸ್ಥೆಯನ್ನು ಕಲ್ಪಿಸಲಾಯಿತು. ಶ್ರೀ ಹೆಚ್ಚೇಲ್ ಬಂಗೇರರವರನ್ನು, ಉಸ್ತುವಾರಿಗೆ ನೇಮಿಸಲಾಯಿತು. 1928ರ ನಂತರ ಶ್ರೀ ಎ.ಜ. ಸೋನ್ಸರು ನೇಮಕಗೊಂಡರು. ಇವರು ಪಾಂಗಾಳ ಗುಡ್ಡೆ ಮೂಲದ ಉಚ್ಚಿಲದಲ್ಲಿ ವಾಸಿಸುತ್ತಿದ್ದ ಕೃಷಿ/ ನರ್ಸರಿ ಹಿನ್ನೆಲೆ ಕುಟುಂಬದ ಸ್ವರು. ಇವರನ್ನು ತರಬೇತಿಗಾಗಿ ಮದ್ರಾಸ್‌ಗೆ ಕಳುಹಿಸಲಾಗಿತ್ತು. ಅವರು ವಿದ್ಯಾಭ್ಯಾಸ ಪಡೆದು ವಾಪಾಸಾದ ನಂತರ ಬಾಸೆಲ್ ಮಿಶನ್ ಫಾರ್ಮ್‌ನ್ನು ಉನ್ನತ ಮಟ್ಟಕೇರಿಸಲು ಪ್ರಯತ್ನಿಸಲಾಯಿತು. ಫಾರ್ಮಿನೊಳಗೆ ಕ್ರೈಸ್ತರ ಮನೆಗಳೆದ್ದು ಕ್ರೈಸ್ತ ಗಾಯನ ಹಾಡಿ ಪ್ರಾರ್ಥನೆ ಮಾಡುವಾಗ ಭೂತ, ಪಿಶಾಚಿ ಮುಂತಾದವುಗಳು ಮಾಯವಾಯಿತು, ಹಗಲಿನಲ್ಲಿಯೂ ಈ ಪರಿಸರದಲ್ಲಿ ಯಾರೂ ಸುಳಿಯುತ್ತಿರಲಿಲ್ಲ ಎಂಬ ವರದಿಗಳು ಸಿಗುತ್ತವೆ. 1928ರಲ್ಲಿ ರೆವೆ. ಫಿಶರ್‌ರವರಿದ್ದಾಗ ಮೂಡುಬಿದ್ರೆ ಚೌಟ ಅರಸರ ಸ್ಥಳದಲ್ಲಿದ್ದ ಬೋವಿ ಜನಾಂಗದವರ ಮಾರಿಗುಡಿ ಸ್ಥಳಾಂತರವಾದಾಗ ಅದನ್ನು ಬಿಚ್ಚುವಾಗ ಅದರಲ್ಲಿದ್ದ ಬೋದಿಗೆ ಕಂಬ ಮತ್ತು ಮರ ಮಟ್ಟುಗಳನ್ನು ಬಾಸೆಲ್ ಮಿಶನ್ ಫಾರ್ಮಿಗೆ ತಂದು ಫಾರ್ಮ್ ಕಟ್ಟಡ ನಿರ್ಮಾಣಕ್ಕೆ ಬಳಸಿಕೊಳ್ಳಲಾಯಿತಂತೆ. 1950ರ ನಂತರ ಈ ಫಾರ್ಮನ್ನು ಶ್ರೀಯುತ ಸೋನ್ಸರೇ ನೋಡಿಕೊಳ್ಳುತ್ತಿದ್ದು ಪ್ರಸ್ತುತ ಇದು ಸೋನ್ಸ್ ಫಾರ್ಮ್ ಹೆಸರಿನೊಂದಿಗೆ ಅವರ ಕುಟುಂಬದವರಿಂದ ನಡೆಸಲ್ಪಡುತ್ತಿದೆ.

1934ರಲ್ಲಿ ಕ್ರೈಸ್ತ ಪತ್ರಿಕೆಯೊಂದರಲ್ಲಿ ಬಾಸೆಲ್ ಮಿಶನ್ ಫಾರ್ಮ್ ಬಗ್ಗೆ ವರದಿಯಾದದ್ದು ಹೀಗೆ. ಮೂಡಬಿದ್ರೆ ಕೃಷಿಕ್ಷೇತ್ರವನ್ನು 1926ಲ್ಲಿ ತರೆದರೂ ಆದರ ಸುಮಾರು 200 ತೆಂಗಿನ ಸಸಿಗಳನ್ನು ನೆಡಲಾಯಿತು, ಖಾಲ್ ಮಿನ್ 323ನೆಯ

ತುಳುನಾಡಿನಲ್ಲಿ ಬಾಸೆಲ್ ಮಿಶನ್ ಮತ್ತಿತರ ಲೇಖನಗಳು...

153