Jump to content

Page:ತುಳುನಾಡಿನಲ್ಲಿ ಬಾಸೆಲ್ ಮಿಶನ್ ಮತ್ತಿತರ ಲೇಖನಗಳು.pdf/170

From Wikisource
This page has been proofread.

ಕುಡಿಯುವ 6 ಹೊಂಡಗಳು ಮಾತ್ರ ಕಾಣುತ್ತವೆ. ಬತ್ತ ಕುಟ್ಟುವ ಕೋಣೆಯಲ್ಲಿ ಬತ್ತ ಕುಟ್ಟುವ 4 ಹೊಂಡಗಳು, ಒಂದು ದೊಡ್ಡ ಗೊಬ್ಬರ ಗುಂಡಿ, ಬೈಹುಲ್ಲು ಹಾಕುವ ಕಟ್ಟಡಗಳು ನೋಡಿ ನಮ್ಮನ್ನು ಅಣಕಿಸುವಂತಿದೆ. ಬೋಡಾಯಿನಾತ್ ನೀ‌ರ್ದ ವ್ಯವಸ್ತೆ ಉಂಡು ಮೂಜಿ ಬುಳೆ ಎಂಚಲಾ ದೆಪ್ಪೊಲಿ ಏಳ್ ಮುಡಿ ಬಿತ್ತ್ ಬಿತ್ತುನ ಪೊರ್ಲುದ ಕಂಡ ಉಂಡು, ಕೈಕಂಜಿ, ಜನ ಇತ್ತಂಡ ಎಂಚಲಾ ಬೆನೊಲಿ, ಆಂಡ ದಾನ್ಯ ಮಲ್ಪರೆ ಬಂಗ ಉಂಡು ದಾಯೆ ಪಂಡ ನವಿಲುದ ಉಪದ್ರ ಉಂಡು” ಎನ್ನುತ್ತಾರೆ ಅಲ್ಲಿ ಪ್ರಸ್ತುತ ಕೆಲಸ ಮಾಡುತ್ತಿರುವ ಶ್ರೀ ಅಂಬು. 2003 ತನಕ ಅನಾಥಶಾಲೆಯ ಮುಖ್ಯಸ್ಥರೇ ಇದರ ಉಸ್ತುವಾರಿಯಾಗಿದ್ದರು. ಪ್ರಸ್ತುತ ಸಂಕಲಕರಿಯದಲ್ಲಿ ತೆಂಗಿನ ತೋಟವನ್ನು ಪರಿವರ್ತಿಸಿ ರಬ್ಬರ್ ಬೆಳೆಯನ್ನು ಬೆಳೆಸಲಾಗುತ್ತಿದೆ.
ಉಚ್ಚಿಲ ಸಭೆ ಸ್ಥಾಪನೆಯಾದ ಮೂಲ ಸ್ಥಳ ಪರಬಾರೆಯಾಗಿದೆ. ಪ್ರಸ್ತುತವಿರುವ ನಿವೇಶನದಲ್ಲಿ ಸುಮಾರು ಎಕ್ರೆ ಸ್ಥಳವಿದ್ದು ದೇವಾಲಯ, ಶಾಲೆ, ಸಭಾಪಾಲಕರ ನಿವಾಸವಿದೆ. ಸುಮಾರು 30 ಕುಟುಂಬಗಳವರು ಮಿಶನ್‌ ಆಸ್ತಿಯಲ್ಲಿ ವಾಸ ಮಾಡುತ್ತಿದ್ದು ಸುಮಾರು 40 ಮನೆಗಳು ಕ್ರೈಸ್ತೇತರರದ್ದು ಇದೆ. ಇಲ್ಲಿ ಮಿಶನರಿಗಳು ಮಿಶನ್ ಆದಾಯಕ್ಕಾಗಿ ಬತ್ತ, ಹೊಗೆಸೊಪ್ಪು ಬೆಳೆಗಳನ್ನು ಬೆಳೆಸುತ್ತಿದ್ದರು.
ಹಳೆಯಂಗಡಿ-1841ರಲ್ಲಿ ಸ್ಥಾಪನೆಯಾದಾಗ ಇದ್ದ ಕದಿಕೆ ಸ್ಥಳ ಪರಬಾರೆಯಾಗಿದೆ. ನಂತರ ಪಡುಹಿತ್ಲಿಗೆ ವರ್ಗಾವಣೆಯಾಗಿತ್ತು. ಆನಂತರ ಪ್ರಸ್ತುತವಿರುವ ಸ್ಥಳಕ್ಕೆ ವರ್ಗಾವಣೆಯಾಗಿದೆ. ಶಾಲೆ, ದೇವಾಲಯ, ಈ ಸ್ಥಳವೂ ಗೇಣಿಯವರಿಗೆ ಆಗಿದೆ. ಸುಮಾರು 30 ಕುಟುಂಬಗಳು ಮಿಶನ್ ಆಸ್ತಿಯಲ್ಲಿದ್ದು ಬೇರೆಯವರಿಗೂ ಸ್ಥಳಗಳು ಹೋಗಿವೆ. ಇಲ್ಲಿ ಮುಖ್ಯವಾಗಿ ಭತ್ತ ಮತ್ತು ತೆಂಗು ಬೆಳೆಸಲಾಗುತ್ತಿತ್ತು. ಸಸಿಹಿತ್ಲುವಿನಲ್ಲಿನ ಬೇಸಾಯವು ಮಿಶನರಿಗಳು ಇಲ್ಲಿ ಬಂದಾಗ ಪ್ರಾರಂಭವಾದದ್ದು. ಇಲ್ಲಿ ಹೊಳೆ ಬದಿಗೆ ಅಡ್ಡವಾಗಿ ಕಟ್ಟ ಕಟ್ಟಿ ಬೇಸಾಯಕ್ಕೆ ಅನುವು ಮಾಡಿರುವುದು ಅವರ ನಾಯಕತ್ವವೇ ಎಂಬ ಬಾಯ್ದೆರೆ ಹೇಳಿಕೆಗಳಿವೆ.
ಪಾದೂರು ಮತ್ತು ಸಾಂತೂರು ದೇವಾಲಯಗಳಿದ್ದ ಹಿಂದಿದ್ದ ನಿವೇಶನ ಪರಬಾರೆಯಾಗಿದೆ. ಈಗಿರುವ ಸ್ಥಳ ಅನಂತರ ಪಡೆದುಕೊಂಡದ್ದು. ಶಿರ್ವ ಕಟ್ಟಿಂಗೇರಿ, ಪಾದೂರು, ಕುತ್ಯಾರ್, ಸಾಂತೂರು ಸಭೆಗಳಲ್ಲಿ ನೂರಾರು ಎಕ್ರೆ ಸ್ಥಳವಿದೆ. ಪಾದೂರು, ಶಿರ್ವ, ಸಾಂತೂರು ಸಭೆಯ ವ್ಯಾಪ್ತಿಯಲ್ಲಿದ್ದ ಸುಮಾರು 20 ಎಕ್ರೆ ಸ್ಥಳ ಪೆಟ್ರೋಲಿಯಂ ಸಂಸ್ಥೆಗೆ ಮತ್ತು ಉಷ್ಣವಿದ್ಯುತ್ ಸ್ಥಾವರಕ್ಕೆ ಹೋಗಿದೆ. ಪಾದೂರಿನಲ್ಲಿ ಕ್ರೈಸ್ತರು ಮಿಶನ್‌ ಆಸ್ತಿಯಲ್ಲಿಲ್ಲ. ಶಿರ್ವ, ಕುತ್ಯಾರ್, ಸಾಂತೂರು ಕಡೆಗಳಲ್ಲಿ ಹಲವಾರು 158

ತುಳುನಾಡಿನಲ್ಲಿ ಬಾಸೆಲ್ ಮಿಶನ್ ಮತ್ತಿತರ ಲೇಖನಗಳು...