Jump to content

Page:ತುಳುನಾಡಿನಲ್ಲಿ ಬಾಸೆಲ್ ಮಿಶನ್ ಮತ್ತಿತರ ಲೇಖನಗಳು.pdf/176

From Wikisource
This page has been proofread.

ರಾಜ್ಯದಲ್ಲಿ ಭದ್ರತೆ, ಕ್ಷೇಮ ರಾಜ ರಾಣಿಗೆ ಇರುವಂತೆ ದಯಮಾಡು ಚಕ್ರವರ್ತಿಗಾಶೀರ್ವಾದ !</poem>

4.

 ಕರ್ತಾ ನಮ್ಮ ರಾಜ್ಯದಲ್ಲಿ ನಿನ್ನ ರಾಜ್ಯ ಸ್ಥಾಪಿಸು
ರಾಜ ಪ್ರಜೆಯೆಲ್ಲರನ್ನು ಸ್ವರ್ಗವಾಸಕೈದಿಸು
ಸಿಕ್ಕಲಿ ಮನಶ್ಯಾಂತಿ ಅಲ್ಲಿ ನಿತ್ಯ ವಿಶ್ರಾಂತಿ
ಬೇಡಿದ್ದನ್ನು ದಯಮಾಡು ಚಕ್ರವರ್ತಿಗಾಶೀರ್ವಾದ !

1950ರ ಆವೃತ್ತಿ

1.

 ತಂದೆ ನಿನ್ನ ಆಶೀರ್ವಾದ ರಾಷ್ಟ್ರಪತಿಗಾಗಲಿ
ಆತನಿಂದ ನಿನ್ನ ಶ್ರೇಷ್ಠ ಚಿತ್ತ ನೆರವೇರಲಿ
ನಿನ್ನ ಸಭಾ ರಕ್ಷಣೆ, ಶತ್ರು ಸೇನಾ ಶಿಕ್ಷಣೆ
ಆಗುವಂತೆ ದಯಮಾಡು, ರಾಷ್ಟ್ರಪತಿಗಾಶೀರ್ವಾದ !

2.

ಸದ್ವಿಶ್ವಾಸವೇ ಗುರಾಣಿ ಖಡ್ಗ ನಿನ್ನ ಆತ್ಮವೇ
ನ್ಯಾಯ, ನೀತಿ, ಶಾಂತಿ, ಪ್ರೀತಿ ಇವು ರಾಜ ಭೂಷಣೆ,
ರಾಜ್ಯ ಕಾರ್ಯ ಸಿದ್ಧಿಯು, ದೇಶದೋಳ್ ಸಮೃದ್ಧಿಯು
ಇವನ್ನೆಲ್ಲಾ ದಯಮಾಡು ರಾಷ್ಟ್ರಪತಿಗಾಶೀರ್ವಾದ !

3.

 ಜ್ಞಾನವುಳ್ಳ ಮಂತ್ರಿಸಭೆ, ಜಯಶಾಲಿ ಸೈನ್ಯವು
ನಂಬಿಗಸ್ತ ಪರಿಚಾರ, ರಾಜ ನಿಷ್ಠಾ ಪ್ರಜೆಯು
ರಾಜ್ಯದಲ್ಲಿ ಭದ್ರತೆ, ಕ್ಷೇಮ ರಾಷ್ಟ್ರಪತಿಗೆ
ಇರುವಂತೆ ದಯಮಾಡು, ರಾಷ್ಟ್ರಪತಿಗಾಶೀರ್ವಾದ !

4.

 ಕರ್ತಾ ನಮ್ಮ ರಾಜ್ಯದಲ್ಲಿ ನಿನ್ನ ರಾಜ್ಯ ಸ್ಥಾಪಿಸು
ರಾಷ್ಟ್ರಪತಿ ಪ್ರಜೆಯನ್ನು ಸ್ವರ್ಗವಾಸಕೈದಿಸು
ಸಿಕ್ಕಲಿ ಮನಶ್ಯಾಂತಿ ಅಲ್ಲಿ ನಿತ್ಯ ವಿಶ್ರಾಂತಿ
ಬೇಡಿದ್ದನ್ನು ದಯಮಾಡು ರಾಷ್ಟ್ರಪತಿಗಾಶೀರ್ವಾದ!

ಈ ಸಂಗೀತವು 1913 ರ ಅವದಿಯಲ್ಲಿ ರಚಿಸಲ್ಪಟ್ಟಿದ್ದು ಜರ್ಮನ್

164

ತುಳುನಾಡಿನಲ್ಲಿ ಬಾಸೆಲ್ ಮಿಶನ್ ಮತ್ತಿತರ ಲೇಖನಗಳು...