Jump to content

Page:ತುಳುನಾಡಿನಲ್ಲಿ ಬಾಸೆಲ್ ಮಿಶನ್ ಮತ್ತಿತರ ಲೇಖನಗಳು.pdf/178

From Wikisource
This page has been proofread.

ಕರಾವಳಿಯ ಕ್ರೈಸ್ತರ ಆರಾಧನೆಗಳಲ್ಲಿ ಸಾಂಸ್ಕೃತಿಕ ಪಲ್ಲಟ

ಕ್ರೈಸ್ತ ಧರ್ಮಕ್ಕೆ 2 ಸಾವಿರ ವರ್ಷಕ್ಕಿಂತಲೂ ಮಿಕ್ಕಿದ ಇತಿಹಾಸ. ಕರಾವಳಿ ಜಿಲ್ಲೆಯಲ್ಲಿರುವ ಕ್ರೈಸ್ತರಲ್ಲಿ ಎರಡು ವಿಭಾಗ ಮೊದಲನೆಯದು ಕೆಥೋಲಿಕ್ ಕ್ರೈಸ್ತರು ಎರಡನೆಯದು ಪ್ರೊಟೆಸ್ಟಂಟ್ ಕ್ರೈಸ್ತರು. ಕೆಥೋಲಿಕರ ಮಾತೃ ಭಾಷೆ ಕೊಂಕಣಿ ಯಾದರೂ ಕನ್ನಡ ತುಳು ಅವರ ವ್ಯವಹಾರಿಕ ಭಾಷೆಯೂ ಆಗಿದೆ. ಪ್ರೊಟೆಸ್ಟಂಟ್ ಕ್ರೈಸ್ತರ ಮಾತೃ ಭಾಷೆ ತುಳು ಕನ್ನಡ ವ್ಯವಹಾರಿಕ ಭಾಷೆಯಾಗಿದೆ.

ಕೆಥೋಲಿಕ್ ಮತ್ತು ಪ್ರೊಟೆಸ್ಟಂಟ್ ಆರಾಧನೆಗಳಲ್ಲಿ ಹೆಚ್ಚು ಮಹತ್ವವಾದದ್ದು 1) ಸತ್ಯವೇದ 2) ಪ್ರಾರ್ಥನೆ 3) ಸಂಗೀತ, ಕೆಥೋಲಿಕ ಕ್ರೈಸ್ತರಲ್ಲಿ ಮೊದಲಿಗೆ ಸತ್ಯವೇದ, ಪ್ರಾರ್ಥನೆ, ಸಂಗೀತ ಇವುಗಳು ಲ್ಯಾಟಿನ್ ಭಾಷೆಗಳಲ್ಲಿಯೇ ಇತ್ತು ಧರ್ಮಗುರುಗಳು ಓದಿ ಕೊಂಕಣಿ ಕನ್ನಡ, ಅಥವಾ ತುಳು ಭಾಷೆಯಲ್ಲಿ ವಿವರಿಸಬೇಕಿತ್ತು. ಇಡೀ ಬೈಬಲ್ ಧರ್ಮಗುರುಗಳು ಮಾತ್ರ ಅಧ್ಯಯನ ಮಾಡಿ ಬೋಧನೆ ಮಾಡಬೇಕಿತ್ತು. ಕೊಂಕಣಿ ಭಾಷೆಗೆ ಬೈಬಲ್ 1858ರಲ್ಲಿ ಭಾಷಾಂತರವಾದಾಗ ಹೊಸ ಒಡಂಬಡಿಕೆಯ 4 ಸುವಾರ್ತೆಗಳು ಮಾತ್ರ ಅವರಲ್ಲಿ ಬಳಕೆಯಲ್ಲಿತ್ತು. ಆದರೆ ಈಗ ಇಡೀ ಬೈಬಲ್ ಕೊಂಕಣಿಗೆ ಭಾಷಾಂತರವಾಗಿದ್ದು ಎಲ್ಲರೂ ಬಳಸುವಂತಾಗಿದೆ. ಇಂಗ್ಲಿಷ್, ಕನ್ನಡ, ತುಳು ಭಾಷೆಯ ಬೈಬಲ್ ಸಹಾ ಬಳಕೆಯಲ್ಲಿದೆ.

ಆರಾಧನೆಗಳಲ್ಲಿ ಪ್ರಾರ್ಥನೆಗಳು ಹಿಂದೆ ಹೆಚ್ಚು ಲ್ಯಾಟಿನ್ ಭಾಷೆಯಲ್ಲಿತ್ತು. ಧರ್ಮಗುರು ಹೇಳುವ ಪ್ರಾರ್ಥನೆಗಳು, ಮಣಿಸರ ಹಿಡುಕೊಂಡು ಬಾಯಿ ಪಾಠವಾಗಿ ಮಾಡುವ ಪ್ರಾರ್ಥನೆ ಲ್ಯಾಟಿನ್‌ನಲ್ಲಿತ್ತು. ಈಗ ಕೊಂಕಣಿ ಪ್ರಾರ್ಥನಾ ಪುಸ್ತಕಗಳು ಬಳಕೆಯಲ್ಲಿದೆ. ಮಕ್ಕಳಿಗೆ ಕ್ರೈಸ್ತ ಶಿಕ್ಷಣವು ಮೊದಲಿಗೆ ಹಲವು ಭಾಗಗಳಲ್ಲಿ ತುಳು ಬಳಕೆಯಲ್ಲಿತ್ತು. ಈಗ ಕೊಂಕಣಿಯಲ್ಲಿವೆ.

ಹಾಡುವ ಹಾಡುಗಳು ಹೆಚ್ಚಿನವು ಲ್ಯಾಟಿನ್ ಭಾಷೆಯಲ್ಲಿತ್ತು. ಆನಂತರದ ವರ್ಷಗಳಲ್ಲಿ ಕೊಂಕಣಿ ಹಾಡುಗಳು ಬಂದವು. ಇವುಗಳೆಲ್ಲವು ವಿದೇಶಿ ಸ್ವರಗಳಲ್ಲಿ ರಚಿತವಾದ ಹಾಡುಗಳು. ಹಲವು ವರ್ಷಗಳಿಗೊಮ್ಮೆ ಹೊಸ ಹೊಸ ಹಾಡುಗಳು

166

ತುಳುನಾಡಿನಲ್ಲಿ ಬಾಸೆಲ್ ಮಿಶನ್ ಮತ್ತಿತರ ಲೇಖನಗಳು.