Jump to content

Page:ತುಳುನಾಡಿನಲ್ಲಿ ಬಾಸೆಲ್ ಮಿಶನ್ ಮತ್ತಿತರ ಲೇಖನಗಳು.pdf/189

From Wikisource
This page has been validated.

ಸ್ವಿಜರ್‌ಲ್ಯಾಂಡಿನಲ್ಲಿ ಸಾಂತಾಕ್ಲಾಸ್ ಶಿಷ್ಟರನ್ನು ರಕ್ಷಿಸುವ ದುಷ್ಟರನ್ನು ಶಿಕ್ಷಿಸುವ ಸಂತನಾಗಿದ್ದಾನೆ.

ಒಂದು ದಿನ ಬಡ ವಿಧವೆಯೋರ್ವಳು ಗೋಳಾಡುತ್ತಾ ಈತನಿಗೆ ಇದಿರಾದಳು ಮೂರು ಮಕ್ಕಳು ವಿದ್ಯಾರ್ಜನೆಗಾಗಿ ಅಥೇನ್ಸ್‌ಗೆ ಹೋಗುವ ದಾರಿಯಲ್ಲಿ ಹೋಟೇಲಿನವನೊಬ್ಬನ ಸಂಗಡ ತಂಗಿದ್ದಾಗ, ಅವನು ಆ ಮಕ್ಕಳನ್ನು ಕೊಂದು ಉಪ್ಪಿನಕಾಯಿ ಮಾಡಿ ಪಾತ್ರೆಯಲ್ಲಿಟ್ಟನಂತೆ ! ಬಿಷಪ್ ನಿಕೋಲಸ್‌ ಅವರಿಗಾಗಿ ದೇವರಲ್ಲಿ ಪ್ರಾರ್ಥಿಸಲು ಆ ಮಕ್ಕಳಿಗೆ ಮತ್ತೆ ಜೀವ ಬಂತಂತೆ ! ಇದುವೇ ನಿಕೋಲಸನು ಮಕ್ಕಳ ಮನ ಕದಿಯಲು ಕಾರಣವಾಯಿತಂತೆ.

ಮತ್ತೊಂದೆಡೆ ಮೂರು ಹೆಣ್ಣು ಮಕ್ಕಳ ಬಡವನೊಬ್ಬನು ಇದ್ದನಂತೆ. ಆರ್ಥಿಕ ಮುಗ್ಗಟ್ಟಿನ ಪರಿಸ್ಥಿತಿಯಿಂದಾಗಿ ಆ ಮಕ್ಕಳನ್ನು ಮದುವೆ ಮಾಡಿಕೊಡಲು ನಿಶ್ಯಕ್ತನಾಗಿದ್ದನು. ಬಿಷಪ್ ನಿಕೋಲಾಸ್ ಆತನ ಸಹಾಯಕ್ಕೆ ಬಂದು ಮೂರು ಮಕ್ಕಳನ್ನೂ ಮದುವೆ ಮಾಡಿಸಿದನಂತೆ. ಆಗಿನಿಂದ ಬಿಷಪ್ ನಿಕೋಲಾಸ್ ಮಕ್ಕಳಿಗೆ ಉಡುಗೊರೆಗಳನ್ನು ಕೊಡುವುದುನ್ನು ಪ್ರಾರಂಭಿಸಿದನು. ಈತನ ಮರಣಾನಂತರ ಈತನನ್ನು ಸಂತನನ್ನಾಗಿ ಮಾಡಿದರು. ಬಿಷಪ್ ನಿಕೋಲಾಸ್‌ ಸೈಂಟ್ ನಿಕೋಲಾಸ್ ಆಗಿ, ನಂತರ 'ಸಾಂತಾಕ್ಲಾಸ್' ಆದನು.ಈತನ ಗೌರವಾರ್ಥ ದೇವಾಲಯವೊಂದನ್ನು ನಿರ್ಮಿಸಿದರು. ನಂತರ ಅದು ಸುಪ್ರಸಿದ್ಧ ಯಾತ್ರಾ ಸ್ಥಳವಾಯಿತು.

ಸಾಂತಾಕ್ಲಾಸ್ ಇಂದಿಗೂ ಕ್ರಿಸ್ಮಸ್ ಫಾದರ್ ಅಥವಾ ಕ್ರಿಸ್ಮಸ್ ತಾತನೆಂದು ಪ್ರಖ್ಯಾತವಾಗಿದ್ದಾನೆ. ಇಂದಿಗೂ ಕೂಡ ಅನೇಕ ಚರ್ಚುಗಳಲ್ಲಿ ಕ್ರಿಸ್ಮಸ್ ದಿನದಂದು ವ್ಯಕ್ತಿಯೊಬ್ಬ ಈತನ ವೇಷ ಧರಿಸಿಕೊಂಡು ಮಕ್ಕಳಿಗೆ ಉಡುಗೊರೆಗಳನ್ನು ಹಂಚುತ್ತಾನೆ. ಅನೇಕರು ಕ್ರಿಸ್ಮಸ್ ತಾತನ ಚಿತ್ರವಿರುವ ಶುಭಾಶಯ ಪತ್ರಗಳನ್ನು ವಿನಿಮಯ ಮಾಡಿಕೊಳ್ಳುತ್ತಾರೆ. ಒಟ್ಟಿನಲ್ಲಿ ಸಾಂತಾಕ್ಲಾಸ್ ಎಂದರೆ ಮಕ್ಕಳಿಗೆ ಚಿರಪರಿಚಿತವಾದ ದಯೆ ಹಾಗೂ ಕರುಣೆಯ ಸಾಕಾರಮೂರ್ತಿಯಾಗಿದ್ದಾನೆ. ಈತನಲ್ಲಿ ಮಾನವೀಯ ಗುಣಗಳು ತುಂಬಿ ತುಳುಕುತ್ತವೆ.

ಮಕ್ಕಳ, ದೀನದಲಿತರ ಮಿತ್ರ ಸಾಂತಾಕ್ಲಾಸ್ : ಯೇಸು ಸ್ವಾಮಿಯ ಶಿಷ್ಯರು ತಮ್ಮ ಗುರುವಿನ ಹತ್ತಿರ ಒಂದು ಪ್ರಶ್ನೆಯನ್ನು ಕೇಳುತ್ತಾರೆ. “ಗುರುವೇ ಪರಲೋಕದಲ್ಲಿ ಯಾವನು ಹೆಚ್ಚಿನವನು?” ಅದಕ್ಕೆ ಯೇಸು ಒಬ್ಬ ಚಿಕ್ಕ ಬಾಲಕನನ್ನು ಹತ್ತಿರಕ್ಕೆ ಕರೆದು ಅವರ ನಡುವೆ ನಿಲ್ಲಿಸಿ ಅವರಿಗೆ- “ನೀವು ತಿರುಗಿಕೊಂಡು ಚಿಕ್ಕ ಮಕ್ಕಳಂತೆ ಆಗದೆ ಹೋದರೆ ಪರಲೋಕ ರಾಜ್ಯದಲ್ಲಿ ಸೇರುವುದೇ ಇಲ್ಲವೆಂದು

ತುಳುನಾಡಿನಲ್ಲಿ ಬಾಸೆಲ್ ಮಿಶನ್ ಮತ್ತಿತರ ಲೇಖನಗಳು...

177