Jump to content

Page:ತುಳುನಾಡಿನಲ್ಲಿ ಬಾಸೆಲ್ ಮಿಶನ್ ಮತ್ತಿತರ ಲೇಖನಗಳು.pdf/191

From Wikisource
This page has been proofread.

ಮೂಟೆಯನ್ನು ಹೆಗಲ ಮೇಲೆ ಇರಿಸಿಕೊಂಡು ಕಷ್ಟದಲ್ಲಿ ನಡೆಯಲಾರಂಭಿಸಿದನು. ಸ್ವಲ್ಪ ಮುಂದಕ್ಕೆ ಹೋಗುತ್ತಿರುವಾಗ ಒಬ್ಬ ಬಾಲಕನು ಆ ಮಾರ್ಗವಾಗಿ ಬರುತ್ತಿರುವುದನ್ನು ಕಂಡ. ಆತನ ತಲೆಯ ಮೇಲೆ ಕಟ್ಟಿಗೆಯ ಕಟ್ಟೊಂದು ಇತ್ತು. ಮುದುಕನು ಆ ಬಾಲಕನು ಹತ್ತಿರ ಬಂದಾಗ “ಪ್ರಿಯ ಸ್ನೇಹಿತನೇ ಈ ಮುದುಕನಿಗೆ ಸ್ವಲ್ಪ ಸಹಾಯ ಮಾಡಲಾರೆಯಾ?” ಎಂದಾಗ ಆ ಬಾಲಕನು 'ಯಾಕೆ ಮಾಡಬಾರದು? ಖಂಡಿತ ಮಾಡುತ್ತೇನೆ. ಆದರೆ ನಾನು ಈ ಕಟ್ಟಿಗೆಯನ್ನು ಪೇಟೆಗೆ ಮಾರಾಟಕ್ಕಾಗಿ ಒಯ್ಯುತ್ತಿದ್ದೇನೆ. ಅಷ್ಟರ ತನಕ ನೀವು ಕಾಯಬೇಕು, ಇಲ್ಲವಾದರೆ ನೀನು ನನ್ನೊಟ್ಟಿಗೆ ನನ್ನ ಮನೆಗೆ ಬಾ. ನಾನು ಕಟ್ಟಿಗೆಯನ್ನು ಮನೆಯಲ್ಲಿಟ್ಟು ಬಂದು ನಿಮಗೆ ಸಹಾಯ ಮಾಡುತ್ತೇನೆ. ಇಲ್ಲಿಯೇ ಹತ್ತಿರದಲ್ಲಿ ನನ್ನ ಮನೆ ಇದೆ.' ಎಂದಾಗ ಮುದುಕನು ಆ ಹುಡುಗನ ತಲೆಯ ಮೇಲಿದ್ದ ಕಟ್ಟಿಗೆಯ ಮೇಲೆ ತನ್ನ ಭಾರವಾದ ಹೊರೆಯನ್ನೂ ಇಟ್ಟು ಆ ಬಾಲಕನೊಂದಿಗೆ ಅವನ ಮನೆಕಡೆ ನಡೆದ. ಬಾಲಕನಿಗೆ ಹೊರಲಾರದ ಭಾರವಾಗಿದ್ದರೂ ಹೊತ್ತುಕೊ೦ಡು ನಡೆಯಲಾರಂಭಿಸಿದ. ಮೈ ನಡುಗುವ ಚಳಿ, ಮೈ ಮುಚ್ಚುವಷ್ಟು ಬಟ್ಟೆಯೂ ಆ ಹುಡುಗನ ಮೈಮೇಲಿಲ್ಲ. ದಾರಿಯಲ್ಲಿ ಮುದುಕನು ಆ ಹುಡುಗನೊಂದಿಗೆ “ ನೀನು ಎಲ್ಲಿಗೆ ಹೋಗುತ್ತಿದ್ದಿಯಾ ? ಕ್ರಿಸ್ಮಸ್ ಹಬ್ಬಕ್ಕೆ ತಿಂಡಿ ತಿನಿಸು ತರುವುದಕ್ಕಾಗಿಯೋ ? ಎಂದು ಕೇಳಿದ. ಅದಕ್ಕೆ ಆ ಹುಡುಗ, 'ನಾವು ಬಡವರು, ಕ್ರಿಸ್ಮಸ್‌ಗಾಗಿ ಅವನ್ನೆಲ್ಲ ತರಲು ನಾವು ಶಕ್ತರಾಗಿಲ್ಲ. ತಂದೆ ತೀರಿ ಹೋಗಿದ್ದಾರೆ. ನನಗೆ ಎರಡು ತಮ್ಮಂದಿರಿದ್ದಾರೆ, ಒಬ್ಬಳು ತಂಗಿ ಇದ್ದಾಳೆ. ಕಟ್ಟಿಗೆ ಮಾರಾಟ ಮಾಡಿ ನಮ್ಮ ಜೀವನ ಸಾಗಬೇಕಾಗಿದೆ. ತಾಯಿ ನನಗಾಗಿ ಮನೆಯಲ್ಲಿ ಕಾಯುತ್ತಿದ್ದಾರೆ. ಈ ಕಟ್ಟಿಗೆಯನ್ನು ಮಾರಿ ಮನೆಯ ಅಡಿಗೆಗಾಗಿ ಏನಾದರೂ ಪಡೆದುಕೊಳ್ಳಬೇಕಾಗಿದೆ' ಅದಕ್ಕೆ ಆ ಮುದುಕನು ಆದರೆ ಇಂದು ನೀನು ಮನೆಗೆ ಸಾಮಾನು ತೆಗೆದುಕೊಂಡು ಬರುವಾಗ ತಡವಾಗಬಹುದಲ್ಲ? ಆದರೂ ನೀನು ನನಗೆ ಸಹಾಯ ಮಾಡಲು ಬಂದಿದ್ದಿಯಲ್ಲ? ಎಂದಾಗ ಆ ಹುಡುಗನು “ತೊಂದರೆ ಏನು ಬಂತು? ನನ್ನ ತಾಯಿ ನಮಗೆ ಯಾವಾಗಲೂ ಹೇಳುತ್ತಿರುತ್ತಾರೆ ನಮ್ಮಿಂದ ಯಾರೂ ಸಹಾಯ ಬಯಸಿದರೂ ಅಲ್ಲಗಳೆಯಬಾರದೆಂದು. ನೋಡಿ ಇದೇ ನನ್ನ ಮನೆ ಸ್ವಾಮಿ ದಯವಿಟ್ಟು ನಿಮ್ಮ ಮೂಟೆಯನ್ನು ಕೆಳಗಿಳಿಸುವಿರಾ? ಈ ಕಟ್ಟಿಗೆಯನ್ನು ಮನೆಯೊಳಗೆ ಇಟ್ಟು ಬರುತ್ತೇನೆ” ಎಂದು ಒಳಹೊಕ್ಕು ಕಟ್ಟಿಗೆಯ ಕಟ್ಟನ್ನು ಒಳಗಿಟ್ಟು ಹೊರಬಂದು ಮುದುಕನ ಮೂಟೆಯನ್ನು ಬೆನ್ನ ಮೇಲೆ ಹೊತ್ತುಕೊಂಡು “ ಸ್ವಾಮಿ ನಡೆಯಿರಿ ಎಲ್ಲಿಗೆ ಹೋಗಬೇಕು ನಿಮಗೆ” ಎಂದ “ನಿನ್ನ ಮನೆಯ ಒಳಗೆ ಹೋಗು”- ಆ

ತುಳುನಾಡಿನಲ್ಲಿ ಬಾಸೆಲ್ ಮಿಶನ್ ಮತ್ತಿತರ ಲೇಖನಗಳು...

179