Jump to content

Page:ತುಳುನಾಡಿನಲ್ಲಿ ಬಾಸೆಲ್ ಮಿಶನ್ ಮತ್ತಿತರ ಲೇಖನಗಳು.pdf/21

From Wikisource
This page has been validated.

ಮುಂಬಯಿ ಕಡೆಗಳಲ್ಲಿ ಕಲ್ಲಚ್ಚಿನಿಂದ ಮುದ್ರಣಗೊಳ್ಳುತ್ತಿದ್ದ ಕನ್ನಡ ಪುಸ್ತಕಗಳ ಅಕ್ಷರಗಳು ಸುಂದರವಾಗಿರಲಿಲ್ಲ.

1841ರಲ್ಲಿ ಮಂಗಳೂರಿನಲ್ಲಿ ಮುದ್ರಣವನ್ನು ಆರಂಭಿಸಿದವರು ಜಿ. ಎಚ್‌. ವೈಗ್ಲೆ(GOTTFRIED HARTMAN WEIGLE). ಇವರು ಜನಿಸಿದ್ದು 1ನೇ ಜುಲೈ 1816, ವುಟೆಂಬರ್ಗ್‌ ನೆಕಾರ್ ಎಂಬ ನದಿಯ ತಪ್ಪಲು ಪ್ರದೇಶವಾದ ಸುಂದರವಾದ ತಾಣದಲ್ಲಿದ್ದ ಜೆಲ್ ಎಂಬ ಹಳ್ಳಿಯಲ್ಲಿದ್ದ ಸಭಾಪಾಲಕರ ಮನೆಯಲ್ಲಿ. ವಿದ್ಯಾಭ್ಯಾಸದ ಬಳಿಕ 1834ರಲ್ಲಿ ದೈವಜ್ಞಾನ ತರಬೇತಿಗೆ ಸೇರಿದರು. ಇವರು ತರಬೇತಿಗೆ ಸೇರುವಾಗ ಬೋಧಕೋದ್ಯೋಗಕ್ಕೆ ಮಾತ್ರವಲ್ಲ ವಿವಿಧ ತರಬೇತಿಯಲ್ಲಿಯೂ ಪರಿಣಿತರಾಗಿದ್ದರು. 1836ರಲ್ಲಿ ಬೋಧಕೋದ್ಯೋಗಕ್ಕೆ ಸೈಂಟ್ ಜೋರ್ಜ್ ದೇವಾಲಯದಲ್ಲಿ ದೀಕ್ಷೆ ಹೊಂದಿದ ಬಳಿಕ ಬಾಸೆಲ್‌ನಲ್ಲಿ ಉಪನ್ಯಾಸಕರಾಗಿ ಸೇವೆಸಲ್ಲಿಸಿ 1840ರಲ್ಲಿ ಜೆ. ಮುಲ್ಲರ್ (FILLER), ಜೆ. ಅಮ್ಮನ್ (JAMANN), ಎಮ್, ಫಿಟ್ಸ್ (M, R17) ಪ್ರೀತಿಗೂಡಿ ಭಾರತಕ್ಕೆ ಬಂದರು.

ಕೆಗೆ ಭಾರತಕ್ಕೆ ಒಂದಾಗ ಮುಂಬಯಿಗರು ಇಂದು ದೇಶೀಯ ಏಕೊಳ್ಳುವುದು ಮಾತ್ರವಲ್ಲದೆ ಪದಗಳನಲ್ಲಿ ಸ್ಥಾಪಿಸಬೇಕಾದ ಕಲತ್ತು ಮುದ್ರಣದ ಸಂಪೂರ್ಣ ಮಾಹಿತಿಯನ್ನು ಪಡೆಯುವುದಕ್ಕಾಗಿ ಬೊಂಬಾಯಿಯಲ್ಲಿದ್ದ ಅಮೇರಿಕನ್ ಮರಾಠಿ ಮಿಶನ್‌ನವರ ಪ್ರೆಸ್ ಮುಂತಾದ ಕಡೆಗಳಲ್ಲಿ ಆಳದಾಡಿದ್ದು ಮಾತ್ರವಲ್ಲದೆ ಮಂಗಳೂರಿನ ಕೈಸ್ತ ಸಭೆಗಳ ಉಪಯೋಗಕ್ಕಾಗಿದ್ದ ತಾನು ಮತ್ತು ಮೊಗ್ಲಿಂಗ್ ಮತ್ತಿತರರು ಭಾಷಾಂತರಿಸಿ ಕಲ್ಲಚ್ಚು ಮುದ್ರಣದಲ್ಲಿ ಮುದ್ರಿಸಲು ಮುಂಬಯಿಯಲ್ಲಿಯೇ ತಯಾರು ಮಾಡಿದರು. ಒಂದು ಲಿಥೋ ಪ್ರೆಸ್ (ಕಲ್ಲಚ್ಚು ಮುದ್ರಣ ಯಂತ್ರ), ಜರ್ಮನಿಯ ನಾಲ್ಕು ಕಲ್ಲಚ್ಚಿನ ಕಲ್ಲು ಮತ್ತು ಇಬ್ಬರು ನುರಿತ ಮರಾಠಿ ಮುದ್ರಕರೊಂದಿಗೆ ಬಂದರು. ಮುಂಬಯಿಯಲ್ಲಿದ್ದ ಹಲವು ಕ್ರೈಸ್ತ ಸ್ನೇಹಿತರು ಇದಕ್ಕಾಗಿ ಸಹಾಯ ಮಾಡಿದ್ದರು. ಮೊದಲು ತಂದ 50 ಗೀತೆಗಳನ್ನೊಳಗೊಂಡ "ಗೀತಗಳು" ಎಂಬ ಹೆಸರಿನ ಪುಸ್ತಕದಲ್ಲ್ಲಿ ಮೊಗ್ಲಿಂಗ್‌ರವರ 16, ವೈಯವರ 10, ಲೇಯರ್‌ರವರ (Layer) 2 ಗೀತೆಗಳು ಮತ್ತಿತರ ಗೀತೆಗಳಿವೆ. ಮುದ್ರಣದ ಬಗ್ಗೆ ಪುಸ್ತಕದ ಮುಖ ಪುಟದಲ್ಲಿ ಮುಂಬಾಯಿ ಪಟ್ಟಣದಲ್ಲಿ ಪಂಡಿತನಾದ ಆನಂದರಾಯರ ಬರಹದಿಂದ ಕಲ್ಲಿನ ಮೇಲೆ ಚಾಪಿಸಿದ್ದು 1842 ಎಂದು ನಮೂದಿಸಲಾಗಿದೆ.

ವೈಗ್ಲೆ ಮಂಗಳೂರಿಗೆ ಬಂದಾಗ ಅತ್ಯಂತ ಖುಷಿಪಟ್ಟವರು ಹರ್ಮನ್

ತುಳುನಾಡಿನಲ್ಲಿ ಬಾಸೆಲ್ ಮಿಶನ್ ಮತ್ತಿತರ ಲೇಖನಗಳು...
09