ವಿಶ್ವದ ಸಮಸ್ತ ಬೌದ್ಧಿಕ ವ್ಯಾಪಾರಗಳಿಗೆಲ್ಲ ಮನುಷ್ಯನೇ ಕೇಂದ್ರಬಿಂದು. ಮನುಷ್ಯನಿಗೆ ಮನುಷ್ಯತ್ವ ಬಂದುದು ಬುದ್ಧಿಯ ಬೆಂಬಲದಿಂದ. ಈ ಬುದ್ದಿಯನ್ನು ವಿದ್ಯೆ ಪರಿಷ್ಕರಣಗೊಳಿಸುತ್ತದೆ. ಈ ಬುದ್ಧಿ ವಿದ್ಯೆಗಳು(1)ಸ್ವಾನುಭವ (2) ನಿಸರ್ಗ(3)ಗುರು (4)ಗ್ರಂಥ- ಹೀಗೆ ನಾಲ್ಕು ವಿಧದಿಂದ ಬಲಗೊಳ್ಳುತ್ತದೆ. ಸ್ವಾನುಭವ ತಿಳುವಳಿಕೆಯು ವ್ಯಕ್ತಿಗತವಾದುದು. ನಿಸರ್ಗ ತಿಳುವಳಿಕೆಯು ಸ್ಥಳಬದ್ಧವಾದದ್ದು, ಗುರುವಿನಿಂದ ಬರುವ ತಿಳುವಳಿಕೆಯು ಕಾಲಬದ್ಧವಾದದ್ದು. ಆದರೆ ಗ್ರಂಥದಿಂದ ಬರುವ ಜ್ಞಾನವು ಎಲ್ಲಾ ಜ್ಞಾನಗಳನ್ನು ಒಳಗೊಂಡ ಜ್ಞಾನಜ್ಯೋತಿಯಾಗಿರುತ್ತದೆ.
ಉತ್ತಮ ಗ್ರಂಥವು ಒಬ್ಬ ತಪಸ್ವಿಯ, ಮೇಧಾವಿಯ ಇಡೀ ಜೀವನದ ಚಿಂತನದ ಫಲ, ಅನುಭವಾಮೃತ, ಜೀವನದಲ್ಲಿ ಬಂದ ಎಡರು ತೊಡರುಗಳನ್ನು ಎದುರಿಸಲು ಇತರರ ಸಲಹೆ ಕೇಳುವುದಕ್ಕಿಂತ ಗ್ರಂಥಗಳ ಮೊರೆಹೋಗುವುದೇ ಲೇಸು. ಗ್ರಂಥಗುರು ನಮ್ಮೆಲ್ಲ ಸಮಸ್ಯೆಗಳಿಗೂ ಉತ್ತರಿಸಬಲ್ಲ. ದಾರಿ ತೋರಿಸಬಲ್ಲನಲ್ಲದೆ ಸನ್ಮಾರ್ಗದಲ್ಲಿ ನಡೆಸಬಲ್ಲವನಾಗಿದ್ದಾನೆ. ಹಿರಿಯರ ಸಲಹೆ ಕೇಳಿದಾಗ ಸ್ವಾರ್ಥ ಸಾಧನೆಯಲ್ಲಿ ತಪ್ಪು ಬೋಧನೆ ಮಾಡಬಹುದು. ಆದರೆ ಗ್ರಂಥಗುರು ಎಂದಿಗೂ ಮೋಸ ಮಾಡುವುದಿಲ್ಲ. ಒಂದು ಉತ್ತಮ ಗ್ರಂಥವನ್ನು ಮತ್ತೆ ಮತ್ತೆ ಓದುವುದೆಂದರೆ ಸ್ನೇಹಿತನ ಸ್ನೇಹವನ್ನು ಇನ್ನು ಹೆಚ್ಚುಗೊಳಿಸಿದಂತೆ. ಗ್ರಂಥಗಳು ಓದಲಿಕ್ಕಾಗಿ ಇವೆ. ಮುಚ್ಚಿಡಲಿಕ್ಕಾಗಿ ಅಲ್ಲ.ಅವುಗಳ ಉಪಯೋಗವನ್ನು ನಾವು ಸರಿಯಾಗಿ ಮಾಡಿಕೊಳ್ಳಬೇಕು. ಪ್ರಕಟವಾದ ಪ್ರತಿಯೊಂದು ಗ್ರಂಥಕ್ಕೂ ಅದರ ಓದುಗನು ಇದ್ದೇ ಇರುತ್ತಾನೆ. ಆದ್ದರಿಂದ ಯಾವುದೇ ಪುಸ್ತಕವನ್ನು ಅಲಕ್ಷ್ಯ ಮಾಡಬಾರದು.
ಓದುವುದು : ಲಿಖಿತ ಅಥವ ಮುದ್ರಿತ ಸಂಕೇತಗಳ ಮೂಲಕ ವ್ಯಕ್ತವಾಗುವ ಕೃತಿಕಾರನ ಅಬಿಪ್ರಾಯವನ್ನು ಗ್ರಹಿಸುವ ಮತ್ತು ಅದಕ್ಕೆ ಅನುಗುಣವಾಗಿ ಪ್ರತಿಕ್ರಿಯೆಯನ್ನು ವ್ಯಕ್ತಪಡಿಸುವ / ಮಾನವನ ಅನುಭವ ಸಂಪತ್ತನ್ನು ಹೆಚ್ಚಿಸಿಕೊಳ್ಳಲು ಇರುವ ಬಹು ಮುಖ್ಯ ಸಾಧನ. ಪ್ರತಿ ವ್ಯಕ್ತಿಯೂ ಶಿಕ್ಷಣದಿಂದ ತನ್ನ ವ್ಯಕ್ತಿತ್ವವನ್ನು ಪರಿಪೂರ್ಣವಾಗಿ ವಿಕಸಿಸುವಂತೆ ಮಾಡಿಕೊಳ್ಳುವುದು ಅಗತ್ಯವೆಂಬ ಅಬಿಪ್ರಾಯವಿರುವ ಈ ಕಾಲದಲ್ಲಿ ಓದುವುದಕ್ಕೆ ವ್ಯಾಸಂಗ ಕ್ರಮಗಳಲ್ಲಿ ಪ್ರಧಾನ ಸ್ಥಾನವನ್ನು ಕೊಟ್ಟಿದೆ. ಶಾಲಾ ಜೀವನದಲ್ಲಿ ವಿದ್ಯಾರ್ಥಿ ಈ ಕಲೆಯನ್ನು ಬೆಳೆಸಿಕೊಳ್ಳುವ
ತುಳುನಾಡಿನಲ್ಲಿ ಬಾಸೆಲ್ ಮಿಶನ್ ಮತ್ತಿತರ ಲೇಖನಗಳು... 205