Jump to content

Page:ತುಳುನಾಡಿನಲ್ಲಿ ಬಾಸೆಲ್ ಮಿಶನ್ ಮತ್ತಿತರ ಲೇಖನಗಳು.pdf/219

From Wikisource
This page has been proofread.

ಜೋಡಣೆ ಹೇಗೆ. ಪುಸ್ತಕ ಸಂಗ್ರಹ ಹೆಚ್ಚಾದಂತೆ ಅವುಗಳನ್ನು ಜೋಡಿಸುವುದು ಸಮಸ್ಯೆಯಾಗಬಹುದು. ಪುಸ್ತಕಗಳ ಸಂಗ್ರಹದ ರಾಶಿಯಲ್ಲಿ ಬೇಕೆಂದಾಗ ಕೈಗೆ ಸಿಕ್ಕುವಂತಾದರೆ ಮಾತ್ರ ಅದರ ಉಪಯೋಗ ಹೆಚ್ಚು. ಗ್ರಂಥಾಲಯಗಳಲ್ಲಿ ವರ್ಗೀಕರಣ ಪದ್ದತಿ ಪ್ರಕಾರ ಪುಸ್ತಕ ಜೋಡಣೆ ಮಾಡಲಾಗುತ್ತದೆ. ಯಾಕಂದರೆ ಅಲ್ಲಿ ಸಾವಿರಾರು ಪುಸ್ತಕಗಳಿರುತ್ತದೆ. ಆದರೆ ಮನೆಗಳ ಪುಸ್ತಕ ಸಂಗ್ರಹದಲ್ಲಿ ಸ್ವಲ್ಪ ಪುಸ್ತಕಗಳು ಮಾತ್ರ ಇರುವುದರಿಂದ ವಿಷಯಗಳಿಗನುಗುಣವಾಗಿ ಜೋಡಿಸಿಡಬೇಕು. ಸಂಗ್ರಹ ಹೆಚ್ಚಾದಂತೆ ಜೋಡಣೆಯ ಸಮಸ್ಯೆ ಖಂಡಿತ. ಮನೆಯಲ್ಲಿ ಸಂಗ್ರಹ ಮಾಡುವವರು 1) ಸಾಮಾನ್ಯ 2) ತತ್ವಶಾಸ್ತ್ರ 3) ಸಮಾಜ 4)ಭಾಷೆ 5) ವಿಜ್ಞಾನ 6) ತಂತ್ರಜ್ಞಾನ 7) ಕಲೆ 8) ಸಾಹಿತ್ಯ 9) ಚರಿತ್ರೆ ಹೀಗೆ 10 ವಿಭಾಗಳಾಗಿ ವಿಂಗಡಿಸಿ ಜೋಡಿಸಿಟ್ಟರೆ ಬೇಕಾದಾಗ ಬೇಕಿದ್ದ ಪುಸ್ತಕಗಳನ್ನು ಉಪಯೋಗ ಮಾಡಬಹುದು. ನಮಗೆ ಅಗತ್ಯವಿಲ್ಲದ ಪುಸ್ತಕಗಳು ಇದ್ದರೆ ಹತ್ತಿರದ ಗ್ರಂಥಾಲಯಗಳಿಗೆ ಅವುಗಳನ್ನು ದಾನ ಮಾಡಿ ಆ ಗ್ರಂಥಾಲಯದೊಂದಿಗೆ ಸಂಬಂಧವನ್ನು ಹೆಚ್ಚಿಸಿಕೊಳ್ಳಬೇಕು. ಈ ವ್ಯವಸ್ಥೆಯಿಂದ ನಮಗೆ ಬೇಕಿದ್ದ ಗ್ರಂಥಗಳಿಗಾಗಿ ಆ ಗ್ರಂಥಾಲಯಗಳ ಪ್ರಯೋಜನ ಪಡೆಯಬಹುದು.

ಪುಸ್ತಕ ಜೋಪಾನ ಸಂಗ್ರಹಕ್ಕೆ ಪುಸ್ತಕಗಳನ್ನು ಸೇರಿಸುವಾಗ ಅದನ್ನು ಉತ್ತಮ ರೀತಿಯಲ್ಲಿ ಸೇರಿಸಬೇಕು. ಉತ್ತಮವಾದ ಬೈಂಡ್ ಮಾಡಿಸಬೇಕು ಪುಸ್ತಕದಲ್ಲಿದ್ದ ಪಿನ್ನನ್ನು ತೆಗೆದು ಅದರ ಸ್ಥಾನದಲ್ಲಿ ದಾರ ಹಾಕಬೇಕು. ಪಿನ್ನುಗಳಿದ್ದರೆ ಅವುಗಳು ತುಕ್ಕು ಹಿಡಿದು ಪುಸ್ತಕವನ್ನು ಹಾಳು ಮಾಡುತ್ತವೆ. ಹರಿದ ಹಾಳೆಗಳನ್ನು ಸೆಲ್ಯೂಟೇಪಿನಿಂದ ಅಂಟಿಸಬಾರದು. ಸೆಲ್ಯೂಟೇಪ್ ಅಂಟಿಸಿದ ಸ್ಥಳದಲ್ಲಿ ಕೆಂಪಾಗಿ ಅಲ್ಲಿದ್ದ ಅಕ್ಷರಗಳು ಓದಲು ಕಷ್ಟವಾಗುತ್ತದೆ. ಹರಿದ ಕಾಗದಗಳನ್ನು ಬಟರ್ ಪೇಪರ್ ಅಂಟಿಸಿ ಸರಿಪಡಿಸಬಹುದು. ಮನೆಯಲ್ಲಿಯೇ ಪುಸ್ತಕಗಳನ್ನು ದುರಸ್ತಿ ಮಾಡುವುದಿದ್ದರೆ ಪ್ರೆಸ್‌ನಲ್ಲಿ ತಯಾರಿಸಿದ ಅಂಟುಗಳನ್ನೇ ಬಳಸಬೇಕು ವಿನಾ ಮನೆಯಲ್ಲಿ ತಯಾರಿಸಿದ ಗೋದಿ, ಮೈದಾ ಹಿಟ್ಟಿನ ಅಂಟನ್ನು ಅಥವಾ ಅಂಟೆಗಾಗಿ ಅನ್ನವನ್ನು ಬಳಸಬಾರದು.

ಗ್ರಂಥ ಸಂರಕ್ಷಣೆ: ಗ್ರಂಥಗಳು ಹಾಳಾಗಲು ಹಲವಾರು ಕಾರಣಗಳಿವೆ. ಅವುಗಳಲ್ಲಿ ಮುಖ್ಯವಾದುದು ಅವನ್ನು ನಾವು ಉಪಯೋಗಿಸುವ ಕ್ರಮ ಹಾಗೂ ಸಂಗ್ರಹಿಸುವ ಕ್ರಮ. ಜಾಗ್ರತೆಯಿಂದ ಪುಸ್ತಕಗಳನ್ನು ಬಳಸುವುದರಿಂದ ಅವು

ತುಳುನಾಡಿನಲ್ಲಿ ಬಾಸೆಲ್ ಮಿಶನ್ ಮತ್ತಿತರ ಲೇಖನಗಳು.....207