Jump to content

Page:ತುಳುನಾಡಿನಲ್ಲಿ ಬಾಸೆಲ್ ಮಿಶನ್ ಮತ್ತಿತರ ಲೇಖನಗಳು.pdf/28

From Wikisource
This page has been validated.

ನಾಗವರ್ಮನ ಕರ್ನಾಟಕ ಭಾಷಾಭೂಷಣವು(1884), ಲಘು ವ್ಯಾಕರಣ (1880), ಹಳೆಗನ್ನಡದ ಸಂಕ್ಷಿಪ್ತ ವ್ಯಾಕರಣ (1866), ಗ್ರೇಟರ್‌ನ ಕನ್ನಡ ಗ್ರಾಮ‌ರ್, ಸಂಸ್ಕೃತ ಬಾಲವ್ಯಾಕರಣ (1894), ಹೀಗೆ ಮುದ್ರಣದ ಯಾವ ಅಂಶವನ್ನು ತೆಗೆದುಕೊಂಡರೂ ಬಾಸೆಲ್ ಮಿಶನ್ ಪ್ರೆಸ್‌ನ ಕಾರ್ಯವು ಮಹತ್ತರವಾಗಿದೆ. 19ನೇ ಶತಮಾನದ ಉತ್ತರಾರ್ಧದಲ್ಲಿ ಅದು ಕರ್ನಾಟಕದಲ್ಲಿ ಯಾವುದೇ ಪ್ರೆಸ್‌ಗಿಂತ ದೊಡ್ಡದಿದ್ದು ಅದರಲ್ಲಿ ಕನ್ನಡ, ಇಂಗ್ಲಿಷ್, ತುಳು ಮಾತ್ರವಲ್ಲದೆ ತಮಿಳು, ಮಲಯಾಳಂ, ಸಂಸ್ಕೃತ, ಜರ್ಮನ್, ಫ್ರೆಂಚ್, ಕೊಡವ, ಬಡಗ, ಕೊಂಕಣಿ ಮುಂತಾದ ಭಾಷೆಗಳ ಸಾವಿರಾರು ಪುಸ್ತಕ ಮುದ್ರಣಗೊಂಡಿದೆ. ಬಾಸೆಲ್ ಮಿಶನ್ ಪ್ರೆಸ್ ಮುದ್ರಣ ಮಾಡುವುದು ಮಾತ್ರವಲ್ಲದೆ ಅಚ್ಚು ಮೊಳೆಗಳನ್ನು ತಯಾರಿಸುವುದು, ಪೋಟೋ ಬ್ಲಾಕ್‌ಗಳನ್ನು ತಯಾರಿಸುವುದು, ಇತರ ಪ್ರೆಸ್‌ಗಳಿಗೆ ಬೇಕಾದ ಮುದ್ರಣ ಸಾಮಾಗ್ರಿಗಳನ್ನು ತಯಾರಿಸಿ ನೀಡುವುದು, ಮರದ ಬ್ಲಾಕ್‌ಗಳನ್ನು ತಯಾರಿಸುವುದು, ಯಂತ್ರಗಳ ಸಿಲಿಂಡರ್‌ ತಯಾರಿಸುವುದು ಮುಂತಾದ ವಿಭಾಗದಲ್ಲಿ 1929ರಲ್ಲಿ ತಿದ್ದುವವರು 6, ಮುದ್ರಿಸುವವರು 30, ಮೊಳೆ ಜೋಡಿಸುವವರು 42, ಮರದ ಕೆಲಸದವರು 6, ಎರಕ ಹೊಯ್ಯುವವರು 5, ಇಂಜಿನ್ ವಿಭಾಗದವರು 2, ಕೂಲಿಯವರು 14, ಪ್ಯಾಕ್ ಮಾಡುವವರು 2, ಉಗ್ರಾಣದವರು 2, ಗುಡಿಸುವವರು 2, ಪಹರೆಯವರು 3- ಹೀಗೆ 150ಕ್ಕೂ ಮಿಕ್ಕಿ ಕೆಲಸಗಾರಿದ್ದರು ಎನ್ನುವುದು ಈಗ ಚರಿತ್ರೆಗೆ ಸೇರಿದ ವಿಚಾರವಾಗಿದೆ.

1862ರಲ್ಲಿ ಪ್ರಕಟವಾದ ಹಿಂದೂಸ್ಥಾನದ ಮೂಲಿಕೆ ವಿವರ್ತನೆಗಳು ಎಂಬ ಪುಸ್ತಕದ ಬಗ್ಗೆ ಡಾ. ಶ್ರೀನಿವಾಸ ಹಾವನೂರರವರು ಡಾ. ಟಿ.ಎಮ್.ಎ. ಪೈ ಅವರ ಅಭಿನಂದನ ಗ್ರಂಥವಾದ ಸುದರ್ಶನದಲ್ಲಿ ಬರೆದ 'ಮಂಗಳೂರು ಬೋಟನ್ ಅಟೋಗ್ರಫಿ-ಪ್ರಕೃತಿಯ ಸ್ವಮುದ್ರಣ' ಎಂಬ ಲೇಖನದಲ್ಲಿ ಹೀಗೆ ದಾಖಲಿಸಿದ್ದಾರೆ: "ವಾಸ್ತವ ಸಸ್ಯಗಳನ್ನು ಹಾಗೂ ಎಲೆಗಳನ್ನು ಅವುಗಳ ಸಹಜ ವರ್ಣದಲ್ಲಿ ಮುದ್ರಿಸಿ ಪ್ರತಿ ತೆಗೆದು ಪುಸ್ತಕ ರೂಪದಲ್ಲಿ ಹೊರತರುವ ತಂತ್ರದಿಂದ ಪುಸ್ತಕವೊಂದನ್ನು ಪ್ರಕಟಿಸಿದುದು ಜೆ. ಹುಂಜಿಕರ್ ಎಂಬ ಮಿಶನರಿ. ಈ ಅಪೂರ್ವ ಮುದ್ರಣವನ್ನು ಮೆಚ್ಚಬೇಕಾದರೆ 19ನೇ ಶತಮಾನದ ಮಧ್ಯಕಾಲದಲ್ಲಿ ಮುದ್ರಣ ಕಲೆಯ ಪರಿಸ್ಥಿತಿಯ ಅರಿವು ಇರಬೇಕು. ಮಂಗಳೂರಿನಲ್ಲಿ ಬಾಸೆಲ್ ಮಿಶನ್‌ನವರು 1841ರಲ್ಲಿ ಮುದ್ರಣಾಲಯವನ್ನು ಸ್ಥಾಪಿಸಲು ಯೋಚಿಸುವಾಗ ಕೇವಲ ಒಂದು ಡಜನ್ ಮುದ್ರಣಾಲಯಗಳು ಇದ್ದುವಷ್ಟೇ. ಮುದ್ರಣ ಮತ್ತು ಪ್ರಕಾಶನ ಕ್ಷೇತ್ರದಲ್ಲಿ ವಿಲಿಯಂ ಕೇರಿ ಅವರ ಒಂದು ಹೆಸರು ಮಾತ್ರ ಪ್ರಮುಖವಾಗಿ ಕೇಳಿಸುತ್ತಿತ್ತು. ಅನೇಕ


16
ತುಳುನಾಡಿನಲ್ಲಿ ಬಾಸೆಲ್ ಮಿಶನ್ ಮತ್ತಿತರ ಲೇಖನಗಳು...