Jump to content

Page:ತುಳುನಾಡಿನಲ್ಲಿ ಬಾಸೆಲ್ ಮಿಶನ್ ಮತ್ತಿತರ ಲೇಖನಗಳು.pdf/92

From Wikisource
This page has been proofread.

ತುಳು ಜಿಲ್ಲೆಯಲ್ಲಿ ಪತ್ರಿಕೋದ್ಯಮ ಮತ್ತು ಕೆಲವು ಕ್ರೈಸ್ತ ಪತ್ರಿಕೆಗಳಲ್ಲಿ ತುಳುನಾಡು

ಮಂಗಳೂರಿನ ಬಾಸೆಲ್ ಮಿಶನ್‌ ಪ್ರೆಸ್‌ನಲ್ಲಿ ಪ್ರಕಟವಾದ ಮೊದಲ ಕನ್ನಡ ಪತ್ರಿಕೆ 'ಮಂಗಳೂರು ಸಮಾಚಾರ'. ಇದು ವಾರಪತ್ರಿಕೆಯಾಗಿದ್ದು ಜುಲೈ 1843ರಿಂದ 1844 ಫೆಬ್ರವರಿ ತನಕ ಮಾತ್ರವೇ ಪ್ರಕಟಗೊಂಡಿದೆ. ಮೊದಲ ಪ್ರತಿಯ ಕಿರು ಪರಿಚಯ ಹೀಗಿದೆ. 1943 ಜುಲೈ 1. ಕ್ರಯ ಒಂದು ದುಡ್ಡು. ಮೊದಲಿಗೆ ಇದನ್ನು ಪತ್ರಿಕೆ ಎನ್ನದೆ ಕಾಗದ ಎನ್ನುತ್ತಿದ್ದರು. ತಿಂಗಳಿಗೆ ಎರಡಾವರ್ತಿ ಪ್ರಕಟವಾಗುತ್ತಿತ್ತು.

ಕನ್ನಡ ಪತ್ರಿಕಾ ಕ್ಷೇತ್ರದ ಮೊದಲ ಪತ್ರಿಕೆ ಮಂಗಳೂರು ಸಮಾಚಾರವಾದರೂ ಇದು ಸ್ವದೇಶದ್ದಲ್ಲ ಎಂಬ ಕೊರಗನ್ನು ಒಬ್ಬ ಲೇಖಕರು ತಮ್ಮ ಲೇಖನವೊಂದರಲ್ಲಿ ಹೀಗೆ ಹೇಳಿಕೊಂಡಿದ್ದಾರೆ. "ಮತ ಪ್ರಚಾರಕ್ಕಾಗಿ ಮಂಗಳೂರಿಗೆ ಬಂದ ಸಂಸ್ಥೆಯೊಂದರ ಪ್ರಚಾರ ಕಾರ್ಯಗಳಲ್ಲಿ ಇದೂ ಒಂದಾಗಿತ್ತು. ಕ್ರೈಸ್ತ ಧರ್ಮ ಪ್ರತಿಪಾದನೆಯೇ ಮುಖ್ಯ ಉದ್ದೇಶವಾಗಿದ್ದ ಈ ಪತ್ರಿಕೆಯಲ್ಲಿ ಜನರ ಆಶೋತ್ತರಗಳಿಗೆ ಅವಕಾಶ ತೀರಾ ಕಡಮೆ ಇತ್ತು. ಬದಲಾಗಿ ಹಿಂದೂ ಧರ್ಮ ಪರಂಪರೆಗಳ ಟೀಕೆಗೆ ಅವಕಾಶ ವಿರುತ್ತಿತ್ತು. " ಆದರೆ ಬಾಸೆಲ್ ಮಿಶನರಿಗಳು ಪ್ರಾರಂಭಿಸಿದ ಪತ್ರಿಕೆಯಾದ ಮೊದಲ ಪತ್ರಿಕೆಗಳಲ್ಲಿ ಲೇಖಕರು ಅನಿಸಿಕೊಂಡಂತಿಲ್ಲ. ಮಂಗಳೂರು ಸಮಾಚಾರ ಹಾಗೂ ಕನ್ನಡ ಸಮಾಚಾರ ತೀರಾ ಭಿನ್ನವಾದ ಶೈಲಿಯಲ್ಲಿ ಬರುತ್ತಿತ್ತು. ಈ ವಿಚಾರವಾಗಿ ಡಾ ಹಾವನೂರರು ಹೀಗೆ ಬರೆಯುತ್ತಾರೆ. “ಮಿಶನರಿಗಳು ಈ ಪತ್ರಿಕೆಯನ್ನು ಸ್ವಮತ ಪ್ರಸಾರಕ್ಕಾಗಿ ಬೇಕಾದ ಹಾಗೆ ಬಳಸಿಕೊಳ್ಳಬಹುದಾಗಿತ್ತು. ಹಾಗೆ ಮಾಡದ್ದರಿಂದ ಕನ್ನಡದ ಈ ಮೊದಲ ಪತ್ರಿಕೆಯು ಜಾತ್ಯಾತೀತವಾದ ಸಮಸ್ತ ಕನ್ನಡಿಗರನ್ನುದ್ದೇಶಿಸಿದ ಪತ್ರಿಕೆಯಾಗಿ ನಿಂತಿತು. ಕ್ರಿಶ್ಚಿಯನ್ ಮತ ವಿಚಾರಗಳು ವ್ಯಕ್ತವಾದ ಸಂದರ್ಭಗಳೆಂದರೆ ದಾಸರ ಪದ ಹಾಗೂ ಸಂಸ್ಕೃತ ಶ್ಲೋಕಗಳನ್ನು ಕೊಡುತ್ತಾ ಅದಕ್ಕೆ ಸಮಾನಾದ ಬೈಬಲ್ ಉಕ್ತಿಗಳನ್ನು ವಿವರಿಸಿದುದು.” ಆ ನಿಮಿತ್ತದಿಂದ ಪುರಂದರ ದಾಸರ ಕೆಲವು ಹಾಡುಗಳು ಪ್ರಥಮತ ಮುದ್ರಣ ರೂಪದಲ್ಲಿ ಹೊರಬಂದುದು ಇಲ್ಲಿ. ಮೊದಲ ಪತ್ರಿಕೆಯಲ್ಲಿಯೇ ಸರಕಾರದ

80

ತುಳುನಾಡಿನಲ್ಲಿ ಬಾಸೆಲ್ ಮಿಶನ್ ಮತ್ತಿತರ ಲೇಖನಗಳು...