Jump to content

Page:ತುಳುನಾಡಿನಲ್ಲಿ ಬಾಸೆಲ್ ಮಿಶನ್ ಮತ್ತಿತರ ಲೇಖನಗಳು.pdf/95

From Wikisource
This page has been proofread.

ಆ‌. ಮಂಕೀಕರ್, ಯು.ಜಿ.ರಾವ್, ಬಿ.ಎಸ್. ತುಂಗ, ಪಾ.ವೆಂ.ಆಚಾರ್ಯ, ನಿರಂಜನ, ಎಂ.ವಿ. ಕಾಮತ್, ವ್ಯಾಸರಾಯ ಬಲ್ಲಾಳ, ಕುಲವರ್ಮ, ಕೆ.ವಿ. ಭಟ್ಟ, ಡಿ.ಕೆ. ಮೆಂಡನ್ ಮುಂತಾದವರು.

ನವಯುಗ, ಕಂಠೀರವ, ಪ್ರಭಾತ, ರಾಷ್ಟ್ರಬಂಧು, ಅಂತರಂಗ, ಸುದರ್ಶನ, ಯುಗಪುರುಷ, ಭಾರತೀ, ಮುಂತಾದ ಪತ್ರಿಕೆಗಳು ದ.ಕ. ಜಿಲ್ಲೆಯವರು ಹೆಮ್ಮೆಯಿಂದ ಹೇಳಬೇಕಾದ ಪತ್ರಿಕೆಗಳು. 'ಮಂಜೇಶ್ವರದಿಂದ 1885ರಲ್ಲಿ 'ಕನ್ನಡ ಕೇಸರಿ, ಉಡುಪಿಯಿಂದ 1887 ರಲ್ಲಿ 'ಸುದರ್ಶನ, 1905ರಲ್ಲಿ 'ಕೃಷ್ಣಸೂಕ್ತಿ', ಮಂಗಳೂರಿಂದ ಉದಯಚಂದ್ರ 1907, ಜೈನಬಂಧು 191, ಬೋಧಿನಿ 1915, ಸಂಗ್ರಾಮ 1915, ಕನ್ನಡ ಕೋಗಿಲೆ 1916, ಭಕ್ತಿ ಸಂದೇಶ 1918, ಕಂಠೀರವ 1919, ಸಹಕಾರಿ, 1919, ತಿಲಕಸಂದೇಶ, ಸ್ವದೇಶಾಭಿಮಾನಿ, ಕರ್ನಾಟಕ ಕೇಸರಿ, ನವಭಾರತ, ಸತ್ಯಾಗ್ರಹಿ, ಸ್ವತಂತ್ರ ಭಾರತ ಇಂತಹ ಪತ್ರಿಕೆಗಳನ್ನು ಅವಲೋಕಿಸುವುದಾದರೆ ಇಲ್ಲಿನ ಜನರ ಸ್ವಾತಂತ್ರ್ಯದ ಹಂಬಲ ಅನೇಕ ಪತ್ರಿಕೆಗಳ ಹೆಸರಿನಿಂದಲೇ ತಿಳಿದುಬರುತ್ತದೆ.

ತುಳು ಪತ್ರಿಕೆಗಳು- 1936ರಲ್ಲಿ ಉಡುಪಿಯ ನವಯುಗ ಪತ್ರಿಕೆಯ ತುಳು ಸಂಚಿಕೆಯನ್ನು ಪುರವಣಿಯಾಗಿ ತರುತ್ತಿದ್ದರು. 1935ರ ಪ್ರಭಾತ ಪತ್ರಿಕೆಯಲ್ಲಿ ತುಳುಗಾದೆ ಪ್ರಕಟವಾಗುತ್ತಿತ್ತು. ಬಂಟರವಾಣಿ, ಸಂಗಾತಿ, ಪೂಜಾರಿ ಬಂಧು, ಮೀನಾವಳಿ, ಗ್ರಹಪತ್ರಿಕೆಗಳಲ್ಲಿ ತುಳು ವಿಭಾಗಗಳು ಇದ್ದರೂ ಸ್ವತಂತ್ರ ಪತ್ರಿಕೆ ಆದದ್ದು 1970ರಲ್ಲಿ ತುಳು ಸಿರಿಯಿಂದ. ಅನಂತರ ತುಳುಕೂಟ, ತುಳುವಾಣಿ, ತುಳುವೆರೆ ಬಂದು, ತುಳುನಾಡ್, ತುಳುರಾಜ್ಯ, ತುಳುವೆರ್, ತಿಂಗೊಲ್ಗೊಂಜಿ ತೂಟೆ, 1980ರಿಂದ ಗೋವಿಂದ ಪೈ ಸಂಶೋಧನ ಕೇಂದ್ರದಿಂದ ತುಳುವ ತ್ರೈಮಾಸಿಕ ಬರುತ್ತಾ ಇದೆ. ತುಳು ಅಕಾಡೆಮಿ ಪ್ರಕಟಿಸುತ್ತಿರುವ ಮದಿಪು ಪ್ರಕಟಗೊಳ್ಳುತ್ತಿದೆ.

ಕೊಂಕಣಿಯಲ್ಲಿ ಪ್ರಥಮ- 1912-ದಿರವೆನ್, ಹಾಗೂ ರಾಕ್ಲ-1938ರಿಂದ ಇದೆ. ಪತ್ರಿಕೆಗಳು ಹೆಚ್ಚಾಗಿ ಈ ಜಿಲ್ಲೆಯಲ್ಲಿ ಹುಟ್ಟಿವೆ. ಮುಸ್ಲಿಂ ಪತ್ರಿಕೆಗಳನ್ನೂ ನಾವು ಇಲ್ಲಿ ನೋಡುತ್ತೇವೆ. ಹೈದರ್ ಅವರ ಜ್ಯೋತಿ, ಮಹಜದರ ಹಮ್‌ದರ್ದ್, ಬಿ.ಎಂ. ಇದಿನಬ್ಬರ ಉದಯಚಂದ್ರ, ಜಿಲ್ಲೆಯ ಕೆಲವು ಪ್ರಸಿದ್ಧ ಪತ್ರಕರ್ತರು ಈಗ ಕಾಸರಗೋಡು ತಾಲೂಕಿನವರು. ಕಾರಹಳ್ಳ ರಾಮಕೃಷ್ಣ ಶೆಟ್ಟರು, ಕಳ್ಳಿಗೆ ಮಹಾಬಲ ಭಂಡಾರಿ, ಕಯ್ಯಾರ ಕಿಞ್ಞಣ್ಣ ರೈ, ಉತ್ಸವ ಇಲ್ಲವೇ ಸಂಸ್ಕರಣ ಸಂಚಿಕೆಗಳನ್ನು ಹೊರತರುವುದು ಈ ಜಿಲ್ಲೆಯ ವೈಶಿಷ್ಟ್ಯ. ಉದ್ಯಮ ವಾಣಿಜ್ಯಗಳಿಗೆ ಸಂಬಂಧಿಸಿದ ವಿಶಿಷ್ಟ ಪತ್ರಿಕೆಗಳು, ಮಧು ಪ್ರಪಂಚ, ಮೀನುಗಾರ, ಜೀವನಕೃಷ್ಣ, ವರ್ತಕ ಧುರೀಣ, ಅಂಚೆಗೆಳೆಯ, ಅಡಿಕೆ ಪತ್ರಿಕೆ, ದ.ಕ.ಜಿಲ್ಲೆಯಲ್ಲಿ ನವಭಾರತ, ಮುಂಗಾರು,

ತುಳುನಾಡಿನಲ್ಲಿ ಬಾಸೆಲ್ ಮಿಶನ್ ಮತ್ತಿತರ ಲೇಖನಗಳು...

83