Jump to content

Page:ತುಳುನಾಡಿನಲ್ಲಿ ಬಾಸೆಲ್ ಮಿಶನ್ ಮತ್ತಿತರ ಲೇಖನಗಳು.pdf/103

From Wikisource
This page has been proofread.

ತೊಡಗಿದರು. ಆ ಕಾಲದಲ್ಲಿ ಸರಕಾರಿ ಸಹಾಯ ಸಿಕ್ಕುವ ಪದ್ಧತಿ ಇರಲಿಲ್ಲ. ಮತ್ತು ಅಂಥಾ ಸಹಾಯ ಸಿಕ್ಕುವ ಆಶೆ ನಿರೀಕ್ಷೆಯಿಂದ ಮಿಶ್ಯನಿನವರು ಶಾಲೆಗಳನ್ನು ತೆರೆಯಲೂ ಇಲ್ಲ. ಹೀಗೆ ಮಂಗಳೂರಿನಲ್ಲಿ “ಇಂಗ್ಲಿಷ್ ಶಾಲೆ” ಎಂದು ಕರೆಯಲ್ಪಡುತ್ತಿದ್ದ ಮಿಶನ್ ಹೈಸ್ಕೂಲನ್ನು ಬಾಸೆಲ್ ಮಿಶ್ಯನಿನವರು ಸುಮಾರ 87 ವರ್ಷಗಳ ಹಿಂದೆ ತೆರೆದರು. ಸರಕಾರದವರು ಆ ಕಾಲದಲ್ಲಿ ದ್ರವ್ಯ ಸಹಾಯ ಮಡುತ್ತಿರಲಿಲ್ಲ. ಆದೆ ಮಿಶ್ಯನಿನ ಯುರೋಪೀಯ ಸ್ನೇಹಿತರು ವಿವಿಧ ರೀತಿಯಿಂದ ಮಿಶನರಿಗಳಿಗೆ ಸಹಾಯ ಮಾಡಿದರು. ಈ ಶಾಲೆಯಲ್ಲಿ ಕಲಿತು ಮೇಲ್‌ಸ್ಥಿತಿಗೆ ಬಂದು, ಕಡೇ ತನಕ ಅದರ ಮೇಲೆ ಪ್ರೀತಿಯನ್ನಿಟ್ಟಿದ್ದ ಅನೇಕ ಮಹನೀಯರು ಅದಲ್ಲದೆ ಮಿಶನಿನ ಉಪಕಾರಗಳನ್ನು ನೆನಸಿ ಮಿಶನ್ ಹೈಸ್ಕೂಲಿನ ಮೇಲೆ ಸಹಾನುಭೂತಿಯುಳ್ಳವರು ಇದ್ದಾರೆ.

1938ರಲ್ಲಿ ಹೈಸ್ಕೂಲಿನ ಶತಮಾನೋತ್ಸವನ್ನು ಆಚರಿಸಲಾಗಿದ್ದು ಈ ಸಂಭ್ರಮಾಚರಣೆಯ ನೆನಪಿಗಾಗಿ ನಿರ್ಮಿಸಲಾದ ಶತಮಾನೋತ್ಸವ ಕಟ್ಟಡ ಈಗಲೂ ಸುಸ್ಥಿತಿಯಲ್ಲಿದೆ.

1949ರಲ್ಲಿ ಆಂಗ್ಲ ಮಾಧ್ಯಮ ಶಾಲೆಯೊಂದಿಗೆ ಕಾರ್ಯವೆಸಗುತ್ತಿದ್ದ ಬಿ.ಇ.ಎಮ್ ಹೈಸ್ಕೂಲಿನ ಕನ್ನಡ ವಿಭಾಗವು ಪ್ರತ್ಯೇಕಿಸಲ್ಪಟ್ಟು ಆಡಳಿತ ಮಂಡಳಿಯ ಆದೇಶದಂತೆ ಬಿ.ಇ.ಎಂ. ಹಿರಿಯ ಪ್ರಾಥಮಿಕ ಶಾಲೆ ಹೆಸರಿನಿಂದ ಈಗಲೂ ಮುಂದುವರಿಯುತ್ತಿದೆ.

180 ಸಂವತ್ಸರಗಳನ್ನು ದಾಟಿದ ಮಿಶನ್ ಹೈಸ್ಕೂಲ್ 150ನೇ ವಾರ್ಷಿಕೋತ್ಸವವನ್ನು 1988ರಲ್ಲಿ ಆಚರಿಸಿದೆ. 1991ರಿಂದ ಆಂಗ್ಲ ಮಾಧ್ಯಮ ನರ್ಸರಿ ಪ್ರೈಮರಿ ಶಾಲೆ . 1992ರಿಂದ ಬಿ.ಇ.ಎಂ. ಕಂಪೋಸಿಟ್ ಪ್ರಿ ಯುನಿವರ್ಸಿಟಿ ಕಾಲೇಜು ಪ್ರಾರಂಭವಾಗಿದೆ.

180 ವರ್ಷದ ಇತಿಹಾಸವಿರುವ ಶಾಲೆಯಲ್ಲಿ ವಿದ್ಯಾದಾನ ಮಾಡುವುದರ ಮೂಲಕ ಚರಿತ್ರೆ ನಿರ್ಮಿಸಿದ ಕನ್ನಡದ ಮೊದಲ ಪತ್ರಿಕೆಯ ಸಂಪಾದಕರೂ, ದಾಸ ಸಾಹಿತ್ಯವನ್ನು ಸಂಪಾದಿಸಿ ಬೆಳಕಿಗೆ ತಂದ ರೆವೆ. ಹೆರ್ಮನ್ ಮೋಗ್ಲಿಂಗ್, ಜಿಲ್ಲೆಗೆ ಮೊದಲ ಮುದ್ರಣ ವ್ಯವಸ್ಥೆ ತಂದ ಜಿ. ಎಚ್. ವೈಗ್ಲೆ, ಕನ್ನಡ ನಿಘಂಟಿನ ಪ್ರಖ್ಯಾತಿ ಪಡೆದ ಫರ್ಡಿನಾಂಡ್ ಕಿಟೆಲ್, ಕನ್ನಡ ವ್ಯಾಕರಣ ಬರೆದ ಜೀಗ್ಲರ್ ಮುಂತಾದ ಹಲವಾರು ವಿದೇಶಿ ಮಿಶನರಿಗಳನ್ನು ಇಲ್ಲಿ ಸ್ಮರಿಸುವುದು ಯುಕ್ತವಾಗಿದೆ. ಕಳೆದ ವರ್ಷಗಳಲ್ಲಿ ಈ ವಿದ್ಯಾದೇಗುಲದಲ್ಲಿ ವಿದ್ಯಾರ್ಜನೆ ಮಾಡಿದ ಕಯ್ಯಾರ ಕಿಞ್ಞಣ್ಣ ರೈ, ಮಂಜಯ್ಯ ಹೆಗ್ಗಡೆ ಮುಂತಾದ ಮಹನೀಯರು ಈ ಹೈಸ್ಕೂಲಿನವರು ಎಂದು

ತುಳುನಾಡಿನಲ್ಲಿ ಬಾಸೆಲ್ ಮಿಶನ್ ಮತ್ತಿತರ ಲೇಖನಗಳು...

91