Jump to content

Page:ತುಳುನಾಡಿನಲ್ಲಿ ಬಾಸೆಲ್ ಮಿಶನ್ ಮತ್ತಿತರ ಲೇಖನಗಳು.pdf/126

From Wikisource
This page has been proofread.

ತುಳು ಭಾಷೆ ಮತ್ತು ಕ್ರೈಸ್ತರು

ದಕ್ಷಿಣ ಕನ್ನಡ, ಉಡುಪಿ, ಕೊಡಗು, ಮುಂಬಯಿ, ಪ್ರದೇಶಗಳಲ್ಲಿರುವ ಹೆಚ್ಚಿನ ಪ್ರೊಟೆಸ್ಟಂಟ್ ಕ್ರೈಸ್ತರ ತಾಯಿ ಭಾಷೆ ತುಳು. 1834ರಲ್ಲಿ ಬಂದ ಬಾಸೆಲ್ ಮಿಶನರಿಗಳು 1841ರಲ್ಲಿ ತುಳು ಜಿಲ್ಲೆಯಲ್ಲಿ ಮೊದಲ ಪ್ರೆಸ್ ಸ್ಥಾಪನೆ ಮಾಡಿ ಮೊದಲಿಗೆ ಕ್ರೈಸ್ತರ ಧಾರ್ಮಿಕ ಗ್ರಂಥ ಸತ್ಯವೇದದ ಒಂದು ಭಾಗವಾದ “ಮತ್ತಾಯೆ ಬರೆತಿ ಸುವಾರ್ತಮಾನ” ಎಂಬ ಕೃತಿಯೊಂದನ್ನು ಮುದ್ರಣ ಮಾಡಿದರು. ತುಳು ಜಿಲ್ಲೆಯಲ್ಲಿ ತುಳುವೇ ಏಕೆ ಮೊದಲು ಎಂದು ನಮ್ಮಲ್ಲಿ ಪ್ರಶ್ನೆ ಮೂಡುವುದು ಸಹಜ.ಆಗ ಜಿಲ್ಲೆಯಲ್ಲಿ ಪ್ರಚಲಿತದಲ್ಲಿದ್ದದು ತುಳು ಭಾಷೆ ಮಾತ್ರ ಕ್ರೈಸ್ತರ ಆರಾಧನೆಯ ವಿಧಿ ವಿಧಾನಗಳು, ಬೋಧನೆ, ಮುಂತಾದವುಗಳೂ ತುಳುವಿನಲ್ಲಿಯೇ ನಡೆಯುತ್ತಿತ್ತು.ಇಲ್ಲಿದ್ದ ವಿದೇಶಿ ಮಿಶನರಿಗಳು ತುಳು ಭಾಷೆಯನ್ನು ಕಲಿತು ದೇಶಿಯರೊಂದಿಗೆ ತುಳುಕ್ರೈಸ್ತರ ಭಕ್ತಿ ಅಭಿವೃದ್ಧಿಗೆ ಉಪಯೋಗವಾಗುವ ಸತ್ಯವೇದ, ಸಂಗೀತ ಪುಸ್ತಕ. ಸತ್ಯವೇದ ಆಧಾರಿತ ತುಳು ಕಥೆಗಳು, ಕ್ರೈಸ್ತ ಬೋಧನೆಗಳು, ಮುಂತಾದವುಗಳನ್ನು ಮಾಡಿದುದಲ್ಲದೆ ಇನ್ನು ಮುಂದಕ್ಕೆ ಬರುವ ಮಿಶನರಿಗಳ ಉಪಯೋಗಾರ್ಥವಾಗಿ ನಿಘಂಟು, ವ್ಯಾಕರಣ, ಮುಂತಾದವುಗಳನ್ನು ರಚಿಸಿದರು. ಇಲ್ಲಿನ ಮುಖ್ಯ ಸಂಸ್ಕೃತಿಯಾದ ಭೂತಾರಾಧನೆ, ಗಾದೆಗಳು ಮುಂತಾದವುಗಳನ್ನು ದಾಖಲೀಕರಣ ಮಾಡಿ ಪ್ರಕಟಿಸಿರುವುದು ನಮ್ಮೆಲ್ಲರಿಗೆ ತಿಳಿದ ವಿಷಯವೇ ಆಗಿರುತ್ತದೆ.

1841ರಲ್ಲಿ ಆರಂಭವಾದ ಸತ್ಯವೇದದ ತುಳು ಭಾಷಾಂತರ ಮುಂದುವರಿದು ಹಳೆ ಒಡಂಬಡಿಕೆಯಲ್ಲಿ 37 ಪುಸ್ತಕಗಳಿದ್ದು ಇದರಲ್ಲಿ ಕೇವಲ 5 ಪುಸ್ತಕಗಳು ತುಳು ಭಾಷೆಗೆ ಭಾಷಾಂತರವಾಗಿದೆ. ಹೊಸ ಒಡಂಬಡಿಕೆಯಲ್ಲಿರುವ ಎಲ್ಲಾ 27 ಪುಸ್ತಕಗಳು ತುಳು ಭಾಷೆಗೆ ತರ್ಜುಮೆಗೊಂಡು 1847ರಲ್ಲಿ ಕಲ್ಲಚ್ಚು ಮುದ್ರಣದಲ್ಲಿ ಪ್ರಕಟವಾಗುವುದರೊಂದಿಗೆ ತುಳು ಮುದ್ರಣದ ಮೊದಲ ಮಹಾಗ್ರಂಥವೆನಿಸಿಕೊಂಡಿದೆ. ಈ ಗ್ರಂಥ ಬೆಂಗಳೂರಿನಲ್ಲಿರುವ ಬೈಬಲ್ ಸಂಸ್ಥೆಯು ಹಲವಾರು ಬಾರಿ ಮರು ಪ್ರಕಟನೆ ಮಾಡಿದ್ದು ಈಗಲೂ ಕ್ರೈಸ್ತ ಸಭೆಗಳಲ್ಲಿ, ಮನೆಗಳಲ್ಲಿ ಬಳಕೆಯಲ್ಲಿರುವುದು ಹೆಮ್ಮೆಯ ವಿಚಾರವಾಗಿದೆ. ಕಳೆದ ಮೂರು ವರ್ಷಗಳಿಂದ

114

ತುಳುನಾಡಿನಲ್ಲಿ ಬಾಸೆಲ್ ಮಿಶನ್ ಮತ್ತಿತರ ಲೇಖನಗಳು...