Jump to content

Page:ತುಳುನಾಡಿನಲ್ಲಿ ಬಾಸೆಲ್ ಮಿಶನ್ ಮತ್ತಿತರ ಲೇಖನಗಳು.pdf/127

From Wikisource
This page has been proofread.

ತುಳು ಸತ್ಯವೇದದ ಹೊಸ ಒಡಂಬಡಿಕೆ ಭಾಗವು ಈಗ ಬಳಕೆಯಲ್ಲಿರುವ ತುಳುವಿಗೆ ಭಾಷಾಂತರ ಕಾರ್ಯ ಪ್ರಾರಂಭವಾಗಿದ್ದು ಸಧ್ಯದಲ್ಲಿಯೇ ಬಿಡುಗಡೆಗೊಳ್ಳಲಿದೆ.

ತುಳುನಾಡಿನ ತುಳು ಕ್ರೈಸ್ತರ ಸಭೆಗಳ ಆರಾಧನೆಯು 180 ವರ್ಷಗಳ ಹಿಂದೆ ತುಳುವಿನಲ್ಲಿತ್ತು. ಸಂಗೀತ, ಪ್ರಾರ್ಥನೆ, ಸತ್ಯವೇದ ಪಠಣ, ಬೋಧನೆ ಎಲ್ಲವೂ ತುಳುವಿನಲ್ಲಿತ್ತು. ಆದರೆ ಈಗ ಕ್ರೈಸ್ತರ ಆರಾಧನೆಯ ಪ್ರಧಾನ ಭಾಷೆ ಕನ್ನಡ. ಯಾಕಂದರೆ ತುಳುನಾಡಿನಾದ್ಯಂತ ಕನ್ನಡದವರು ಉದ್ಯೋಗ ನಿಮಿತ್ತ ಬಂದವರು ಇಲ್ಲಿ ವಾಸವಾಗಿರುವುದರಿಂದ ಕನ್ನಡದ ಆರಾಧನೆಗೆ ಬದಲಾಗಿದೆ. ಆದರೂ ದೇವಾಲಯಗಳಲ್ಲಿ ಈಗಲೂ ಕೆಲವು ಕಡೆ ತುಳು ಬೈಬಲ್ ಪಠಣದ ವ್ಯವಸ್ಥೆ ಇದೆ. ಕೆಲವು ಬೋಧಕರು ತುಳುವಿನಲ್ಲಿಯೇ ಬೋಧನೆಗಳನ್ನು ಕೊಡುವುದಿದೆ. ಕ್ರೈಸ್ತರ ಮನೆಗಳಲ್ಲಿ ಸತ್ಯವೇದ ಹೇಗೆ ಮೊದಲ ಸ್ಥಾನ ಪಡೆದಿದೆಯೋ ಹಾಗೆಯೇ ಸಂಗೀತ ಪುಸ್ತಕಗಳು ಎರಡನೇ ಸ್ಥಾನವನ್ನು ಪಡೆದಿದೆ. ಪ್ರಸ್ತುತ ಕ್ರೈಸ್ತರಲ್ಲಿ ಬಳಕೆಯಲ್ಲಿರುವ ತುಳು ಸಂಗೀತ ಪುಸ್ತಕವು ಮೊದಲು ಮುದ್ರಣವಾದದ್ದು 1864ರಲ್ಲಿ, ಅದರಲ್ಲಿ 120 ಸಂಗೀತಗಳಿತ್ತು. ಇದೇ ಕೃತಿ ಪರಿಷ್ಕೃತಗೊಂಡು ಪ್ರಸ್ತುತ 251 ಸಂಗೀತಗಳಿವೆ, ಈ ಪುಸ್ತಕ ಈಗಲೂ Balmatta Institute of Printing Technology ನಲ್ಲಿ ಮರುಮುದ್ರಣಗೊಂಡು ಈಗಲೂ ದೇವಾಲಯಗಳಲ್ಲಿಯೂ, ಮನೆಗಳಲ್ಲಿಯೂ ಹಾಡಲ್ಪಡುತ್ತಿದೆ. ಎಲ್ಲಾ ತುಳು ಕ್ರೈಸ್ತರ ಸಭೆಗಳಲ್ಲಿ ಪ್ರತಿ ಭಾನುವಾರ ಆರಾಧನೆಯಲ್ಲಿ ಒಟ್ಟು 5 ಸಂಗೀತ ಹಾಡಲಾಗುತ್ತದೆ. ಇದರಲ್ಲಿ 2 ತುಳು. ಒಮ್ಮೊಮ್ಮೆ ಎಲ್ಲಾ ತುಳು ಸಂಗೀತಗಳನ್ನೇ ಹಾಡುವುದೂ ಇದೆ. ಇಡೀ ಆರಾಧನೆಗಳನ್ನು ತಿಂಗಳಿಗೊಮ್ಮೆ ತುಳುವಿನಲ್ಲಿ ನಡೆಸುವ ಕ್ರಮವೂ ಇದೆ.

ಮುಂಬಯಿಯಲ್ಲಿರುವ ಕ್ರೈಸ್ತ ಸಭೆಗಳಲ್ಲಿ ಕನ್ನಡ ಓದಲು ಬರದವರಿಗಾಗಿ ತುಳುವನ್ನು ಇಂಗ್ಲಿಷ್‌ನಲ್ಲಿ ಓದಲು ಸಹಾಯಕವಾಗುವಂತೆ ತುಳು ಸಂಗೀತ ಪುಸ್ತಕವನ್ನು TRANSLITERATION EDITION ನಲ್ಲಿ ತಯಾರಿಸಲಾಗಿದೆ. ಹೀಗಾಗಿ ಮುಂಬಯಿಯಲ್ಲಿಯೂ ಅಲ್ಲಿನ ರಾಜ್ಯ ಭಾಷೆ ಮರಾಠಿ ಆದರೂ ಅಲ್ಲಿರುವ ಕ್ರೈಸ್ತರು ತುಳು ಸಂಗೀತಗಳನ್ನು ಹೀಗೆ ಓದುತ್ತಾರೆ. ಕೊಲ್ಲಿ ರಾಷ್ಟ್ರಗಳಲ್ಲಿ ವಾಸಿಸುತ್ತಿರುವ ತುಳು ಕ್ರೈಸ್ತರು ಸಹಾ ಇಲ್ಲಿನ ಹಾಗೆಯೇ ತುಳು ಪ್ರಾರ್ಥನೆ, ತುಳು ಸಂಗೀತಗಳನ್ನು ತಮ್ಮ ಮನೆ ಪ್ರಾರ್ಥನೆಗಳಲ್ಲಿ, ಆರಾಧನೆಗಳಲ್ಲಿ ಬಳಸುತ್ತಾರೆ. ಕನ್ನಡ ಮತ್ತು ತುಳು ಸಂಗೀತವು ಈಗ 'Mangalore hymns'ಎಂಬ App ನಲ್ಲಿಯೂ ಲಭ್ಯವಿದೆ. ಇದರಲ್ಲಿ ಕನ್ನಡ ಓದಲು ಬಾರದವರಿಗೆ

ತುಳುನಾಡಿನಲ್ಲಿ ಬಾಸೆಲ್ ಮಿಶನ್ ಮತ್ತಿತರ ಲೇಖನಗಳು...

115