ಮುಂತಾದ ಪ್ರದೇಶಗಳಲ್ಲಿ ಭೂತಾರಾಧನೆ ಮಾಡುತ್ತಿದ್ದ ಗುಂಪುಗಳ ಬಿಲ್ಲವರೇ
ಕ್ರೈಸ್ತ ಮತಕ್ಕೆ ಸೇರಿದ ಹಲವಾರು ನಿದರ್ಶನಗಳು ಬಾಸೆಲ್ ಮಿಶನ್ ವರದಿಗಳಲ್ಲಿ
ಕಂಡು ಬರುತ್ತದೆ. ತುಳುನಾಡಿನಾದ್ಯಂತ ಸ್ಥಾಪನೆಗೊಂಡ ಪ್ರತಿಯೊಂದು ಕ್ರೈಸ್ತ
ಸಭೆಗಳ ಕ್ರೈಸ್ತರ ಸಂಖ್ಯೆಯಲ್ಲಿ 10ರಲ್ಲಿ 9 ಮಂದಿ ಬಿಲ್ಲವರಿದ್ದಾರೆ. ಇವನ್ನು
ಕ್ರೈಸ್ತರಾದವರು ಈಗಲೂ ಇಟ್ಟುಕೊಂಡಿರುವ ಬಳಿಗಳಾದ (surname) ಅಮ್ಮನ್ನ,
ಐಮನ್, ಸಾಲಿನ್ಸ್, ಕರ್ಕಡ, ಮಾಬೆನ್, ಸೋನ್ಸ್, ಕುಂದ, ಕೋಟ್ಯಾನ್, ಬಂಗೇರ
ಇವುಗಳಿಂದ ಕಂಡುಕೊಳ್ಳಬಹುದು. ಕ್ರೈಸ್ತರಾದ ಬಿಲ್ಲವರ ಕುಟುಂಬಕ್ಕೆ ಸಂಬಂಧ
ಪಟ್ಟವರು ಮೂಲ ಧರ್ಮದಲ್ಲಿದ್ದರೂ ಇವರೊಳಗೆ ಈಗಲೂ ಸಂಬಂಧವಿದೆ,
ಇವರು ನಮ್ಮವರು ಎಂಬ ಭಾವನೆ ಇದ್ದು ಸಹಬಾಳ್ವೆ ನಡೆಸುತ್ತಿದ್ದಾರೆ.
ಪರಾಮರ್ಶನ ಸೂಚಿ: 1. ಬಿಲ್ಲವರು ಮತ್ತು ಕ್ರೈಸ್ತರು, ಬೆನೆಟ್ ಜಿ. ಅಮ್ಮನ್ನ, ಕ್ರಿಸ್ತವಂದನ, ಪಾಂಗಾಳ, ಗುಡ್ಡೆ, 2005 2.ತುಳುನಾಡಿನ ಬಿಲ್ಲವರು, ರಮಾನಾಥ್ ಕೋಟೆಕಾರ್, ಸಾಯಿ ಸುಂದರಿ ಟ್ರಸ್ಟ್, ಮಂಗಳೂರು, 2012
ತುಳುನಾಡಿನಲ್ಲಿ ಬಾಸೆಲ್ ಮಿಶನ್ ಮತ್ತಿತರ ಲೇಖನಗಳು...
129