ಸ್ವಾತಂತ್ರ್ಯಪೂರ್ವ ಪಠ್ಯಗಳಲ್ಲಿ ಭಾಷೆ
“ಭಾಷೆ ವಿಶ್ವದ ಪರಮಾಶ್ಚರ್ಯ ಗಳಲ್ಲಿ ಒಂದಾಗಿದೆ. ಅದು ಬಡವ
ಬಲ್ಲಿದರೆಂಬ ಭೇದವಿಲ್ಲದೆ ಸರ್ವರ ಮನೋರಥವನ್ನೀಡೇರಿಸುವ ಕಾಮಧೇನು
ವಾಗಿದೆ. ಮಾನವನ ಐಹಿಕಾಮುಷ್ಠಿಕ ಕ್ಷೇಮಾಭ್ಯುದಯ ಸಾಧನೆಗೆ ಭಾಷೆಯೇ
ಮೂಲ ಕಾರಣ. ಅವನ ಬೌದ್ಧಿಕ ಮಾನಸಿಕ ಸಾಂಸ್ಕೃತಿಕವೇ ಮೊದಲಾದ
ಸರ್ವಾಂಗೀಣ ಪ್ರಗತಿಗನುಗುಣವಾಗಿ ಭಾಷೆಯೂ ವಿಶ್ವವಿಸ್ತಾರವಾಗಿ ಬೆಳೆದಿದೆ.
ಸಂಸ್ಕೃತಿ ವಿಕಾಸ ಹೊಂದಿದಂತೆಲ್ಲ ಭಾಷೆಯೂ, ಭಾಷೆ ಬೆಳೆದಂತೆಲ್ಲ ಸಂಸ್ಕೃತಿಯು
ಪರಸ್ಪರಾವಲಂಬಿಗಳಾಗಿ ಸತತವಾಗಿ ಪ್ರಗತಿ ಹೊಂದುತ್ತಿದೆ. 1786ರಲ್ಲಿ ವಿಲಿಯಂ
ಜೋನ್ಸ್ ಕೆಲವು ಯುರೋಪೀಯ ಭಾಷೆಗಳಿಗೂ ಸಂಸ್ಕೃತಕ್ಕೂ ಇದ್ದ ಸಂಬಂಧವನ್ನು
ವಿವರಿಸಿದಾಗ ಭಾಷಾಶಾಸ್ತ್ರ ವ್ಯಾಸಂಗಕ್ಕೆ ಅಮೂಲ್ಯವಾದ ಕೀಲಿಕೈ
ದೊರೆಯುವಂತಾಯಿತು. ಭಾರತ ದೇಶದಲ್ಲಿ ಕಳೆದ ನೂರಾರು ವರ್ಷಗಳಿಂದ
ಭಾಷಾ ಸಂಶೋಧನ ಕಾರ್ಯಗಳು ಸಾಗುತ್ತಿದೆ.”(ನಾಗರಾಜಯ್ಯ, ಹಂಪ ದ್ರಾವಿಡ
ವಿಜ್ಞಾನ. 1972)
“ನಾವು ದಿನನಿತ್ಯವೂ ಲೀಲಾಜಾಲವಾಗಿ ಬಳಸುತ್ತಿರುವ ಈ ಭಾಷೆ
ನಮ್ಮೆಲ್ಲರಿಗೂ ಅತಿ ಪರಿಚಿತವಾದುದು. ಹಾಗಾಗಿ, ಅದರ ವಿಷಯವಾಗಿ ನಮ್ಮಲ್ಲಿ
ಎಲ್ಲ ತಿಳಿದವರಂತೆ ಮಾತನಾಡುತ್ತಾರೆ. ನಿಜಕ್ಕೂ ನಮ್ಮ ನಾಲಿಗೆಯ ತುದಿಯಲ್ಲಿ
ಕುಣಿಯುವ ಈ ಭಾಷೆಯ ಕುರಿತು ನಾವು ತಿಳಿಯದಿರುವ ಮತ್ತು ತಪ್ಪಾಗಿ
ತಿಳಿದುಕೊಂಡಿರುವ ವಿಷಯಗಳೇ ಜಾಸ್ತಿ.” (ಭಟ್, ಡಿ. ಎನ್. ಶಂಕರ್. ಭಾಷೆಯ
ಬಗೆಗೆ ನೀವೇನು ಬಲ್ಲಿರಿ 2002)
ಹೀಗೆ ಭಾಷೆ ಬೆಳೆದುಕೊಂಡ ಬಗೆ, ಭಾಷೆಯ ಚರಿತ್ರೆ ಬಗ್ಗೆ ಹೆಚ್ಚು
ತಿಳಿದುಕೊಳ್ಳಲು ಈಗ ಬೇಕಾದಷ್ಟು ಗ್ರಂಥಗಳಿವೆ. ಬೇಕಾದಷ್ಟು ಸಂಶೋಧನೆಗಳು
ನಡೆದಿವೆ, ನಡೆಯುತ್ತಲೂ ಇದೆ.
ವಿದೇಶಗಳಿಂದ ಬಂದ ಮಿಶನರಿಗಳೂ ಬ್ರಿಟಿಷ್ ಉನ್ನತಾಧಿಕಾರಿಗಳೂ ಈ ಬಗೆಗೆ ಬಹಳ ಮುತುವರ್ಜಿ ವಹಿಸಿರುವುದನ್ನು ನಾವು ಭಾಷಾ ಚರಿತ್ರೆಯಲ್ಲಿ
130
ತುಳುನಾಡಿನಲ್ಲಿ ಬಾಸೆಲ್ ಮಿಶನ್ ಮತ್ತಿತರ ಲೇಖನಗಳು...