ಬಾಸೆಲ್ ಮಿಶನ್‌ನ ಸೇವೆಯಲ್ಲಿ ಕೃಷಿ, ವಸತಿ, ಸ್ವಾವಲಂಬನೆ
ಭಾರತದಲ್ಲಿ ಬಾಸೆಲ್ ಮಿಶನ್ ಸಂಸ್ಥೆಯು ಸ್ಥಾಪನೆ ಮಾಡಿದ ಎಲ್ಲಾ
ಠಾಣ್ಯಗಳಲ್ಲಿ ದೇವಾಲಯ, ಶಾಲೆ, ಬೋಧಕರುಗಳಿಗೆ, ಶಾಲಾ ಶಿಕ್ಷಕರುಗಳಿಗೆ,
ಸೆಕ್ಷನ್‌ಗಳಿಗೆ ಕ್ವಾಟರ್ಸ್‌ಗಳನ್ನು ನಿರ್ಮಿಸಲು, ಸ್ಮಶಾನ, ಅಲ್ಲದೆ ಸಭೆ ಮತ್ತು
ಶಾಲೆಗಳ ಚಟುವಟಿಕೆಗಳಿಗೆ ಬೇಕಾದ ವಿಶಾಲ ನಿವೇಶನಗಳನ್ನು
ಪಡೆದುಕೊಳ್ಳುತ್ತಿದ್ದುದು ಮಾತ್ರವಲ್ಲದೆ ಅವಶ್ಯವಿದ್ದಲ್ಲಿ ಕ್ರೈಸ್ತರಿಗೆ, ಮಿಶನ್
ಕೆಲಸಗಾರರಿಗೆ ವಸತಿ ಸೌಕರ್ಯ, ಹಾಗೂ ಮಿಶನ್ ನಡೆಸಲು ಆದಾಯಕ್ಕಾಗಿ
ಬೇಸಾಯದ ಸ್ಥಳಗಳನ್ನು ಖರೀದಿಸಿದ್ದರು. ಇದರಲ್ಲಿ ಸ್ಥಳೀಕರ ಕೊಡುಗೆಗಳು,
ಸರಕಾರಿ ದರಕಾಸ್ತುಗಳೂ ಸೇರಿವೆ. ಬರಡು ಭೂಮಿಯನ್ನು ಕೃಷಿಗೆ ಯೋಗ್ಯವನ್ನಾಗಿ
ಪರಿವರ್ತಿಸಿದರು. ಮಡಿಕೇರಿಯಲ್ಲಿ ಕಾಫಿ ತೋಟ, ಕರಾವಳಿ ಪ್ರದೇಶದಲ್ಲಿ ಬತ್ತ,
ತೆಂಗು ಕೃಷಿ ಹಾಗೂ ಉಪ ಬೆಳೆಗಳನ್ನು ಬೆಳೆಯಿಸಿ ಇದರಿಂದ ಬರುವ
ಆದಾಯವನ್ನೂ ಭೂಮಿಯನ್ನು ಕೃಷಿ ಮಾಡುವವರಿಗೆ ಗೇಣಿಗೆ, ವಸತಿಯಿಲ್ಲದವರಿಗೆ
ಬಾಡಿಗೆಗೆ ಭೂಮಿ/ ಪ್ರತಿ ಸಭೆ ಮತ್ತು ಶಾಲೆಗಳ ಪರಿಸರದಿಂದ ಬಂದ ಗಾರ್ಡನ್
ಇನ್‌ಕಮ್ ಮೂಲಕ ಮಿಶನ್ ಕಾರ್ಯಕ್ಕೆ ಆದಾಯವನ್ನು ಭರಿಸಲಾಗುತ್ತಿತ್ತು.
ಕಾರ್ಖಾನೆಗಳಲ್ಲಿ / ಮಿಶನ್ ಸಂಸ್ಥೆ/ ಮಿಶನ್ ಶಾಲೆಗಳ ಉಪಾಧ್ಯಾಯರುಗಳು,
ಸಭಾಪಾಲಕರು ತಿಂಗಳ ಸಂಬಳ ಪಡೆಯುವಾಗ ಹಣದ ಬದಲು ಮಿಶನ್
ಆಸ್ತಿಯಿಂದ ಬಂದ ಅಕ್ಕಿ, ತೆಂಗಿನಕಾಯಿ, ಕಾಯಿಪಲ್ಯ, ಕೋಳಿ, ಕಟ್ಟಿಗೆ, ಹುಲ್ಲು,
ಮರಮಟ್ಟು ಮುಂತಾದವುಗಳನ್ನು ಹಣದ ಬದಲಿಗೆ ಕೊಡುವ ಪದ್ಧತಿಯಿತ್ತು.
ಮಿಶನರಿಗಳ ದಾಖಲೆಗಳಲ್ಲಿ ಸಭಾ ಆಸ್ತಿಯಿಂದ ಹೇಗೆ ಉತ್ಪತ್ತಿ
ಮಾಡುತ್ತಿದ್ದರೆಂಬುದಕ್ಕೆ ಬೇಕಾದಷ್ಟು ಸಿಗುತ್ತವೆ. ಅವುಗಳಲ್ಲಿ ಕೆಲವನ್ನು ಇಲ್ಲಿ
ದಾಖಲಿಸಲಾಗಿದೆ.
ನೀರೇಶ್ವಾಲ್ಯ (ಈಗಿನ ಸ್ಟೇಟ್ ಬ್ಯಾಂಕ್ ಹತ್ತಿರ) ಬಂದ ಬಾಸೆಲ್ ಮಿಶನರಿಗಳು ಈಗಿನ ಸ್ಟೇಟ್ ಬ್ಯಾಂಕ್ ನೀರೇಶ್ವಾಲ್ಯ ಎಂಬ ಸ್ಥಳದಲ್ಲಿ (ಈಗಿನ 1834ರಲ್ಲಿ ಮಂಗಳೂರಿಗೆ ಇರುವ ಪರಿಸರದಲ್ಲಿರುವ ಬಂದರ್/ದಕ್ಕೆ) ಬಾಡಿಗೆ
ತುಳುನಾಡಿನಲ್ಲಿ ಬಾಸೆಲ್ ಮಿಶನ್ ಮತ್ತಿತರ ಲೇಖನಗಳು..
.
147