ಸೆಮಿನೆರಿ ಸ್ಥಳಾಂತರ(1863) ಪ್ರಸ್ತುತ ಹೆಬಿಕ್ ತಾಂತ್ರಿಕ ತರಬೇತಿ ಸಂಸ್ಥೆಯಿರುವ
ಸ್ಥಳದಲ್ಲಿ 1913ರಲ್ಲಿ ಬಾಸೆಲ್ ಮಿಶನ್ ಪ್ರೆಸ್‌ಗೆ ಪ್ರತ್ಯೇಕ ಕಟ್ಟಡ ನಿರ್ಮಾಣಗೊಂಡವು.
ಬಲ್ಮಠ ದೇವಾಲಯದ ವ್ಯಾಪ್ತಿಯಲ್ಲಿರುವ ಪನ್ನೀರ್, ಬಲ್ಮಠ ನ್ಯೂರೋಡ್,
ಕಾಸೆಸ್ ಕಾಂಪೌಂಡ್, ಪೆರ್ಲ್ ಕೌಂಪೌಂಡ್, ಮುತ್ತು ಕೌಂಪೌಂಡ್, ಕುಟ್ಟಿ
ಕಂಪೌಂಡ್, ವಾಸ್‌ಲೇನ್, ಮುಂಡೆಲೆ ಕೂಟ, ಸಿಕ್ ಹೌಸ್, ತಾರೆತೋಟ ಮತ್ತು
ಜೈಲ್ ರೋಡ್ ಮತ್ತು ಸ್ಟೇಟ್ ಬ್ಯಾಂಕ್ ಕಡೆಗಳಲ್ಲಿ ಸುಮಾರು 200ಕ್ಕೂ ಹೆಚ್ಚು ಕ್ರೈಸ್ತ
ಕುಟುಂಬಗಳು ಮಿಶನ್ ಆಸ್ತಿಯಲ್ಲಿ ವಾಸಿಸುತ್ತಿದ್ದು ಕೆಲವು ಪರಬಾರೆಯಾಗಿದ್ದು
ಕೆಲವು ಗೇಣಿ/ ಬಾಡಿಗೆ /ಲೀಸ್/ ಮೂಲಕ ಸಿ.ಎಸ್.ಐ ಟ್ರಸ್ಟ್‌ನಲ್ಲಿ ಉಳಿದಿದೆ.
ಪರಬಾರೆಯಾದ ಮಿಶನ್ ಸ್ಥಳದಲ್ಲಿ ಕ್ರೈಸ್ತೇತರರ ನಿವಾಸಗಳು, ಬಿಲ್ಲರ್‌್ರಗಳ
ಹಲವಾರು ವಸತಿ ಸಮುಚ್ಚಯಗಳು ನಿರ್ಮಾಣಗೊಂಡಿವೆ ಪ್ರಸ್ತುತ ಮಿಶನ್
ಆಸ್ತಿಯೆಂದು ಉಳಿದಿರುವ ಸ್ಥಳಗಳಲ್ಲಿ ಕಾಸೆಸ್, ಕೆ.ಟಿ.ಸಿ. ಶಾಂತಿ ದೇವಾಲಯ,
ಸಭಾಪಾಲಕರ ನಿವಾಸ, ಮೈದಾನ ವೈಯಂ.ಸಿ.ಎ. ಎಸ್.ಸಿ.ಎಮ್.
ಯು.ಬಿ.ಎಂ.ಸಿ.ಶಾಲೆ, ಪ್ರೊಟೆಸ್ಟಾಂಟ್ ಕ್ರಿಶ್ಚನ್ ಕೋಪರೇಟಿವ್ ಸೊಸೈಟಿ,
ಶಾಂತಿನಿಲಯ, ಡಯಾಸಿಸ್ ಆಫೀಸ್ (ಹಿಂದಿನ ವನಿತ ನಿಲಯ) ವುಮೆನ್ಸ್ ಸೆಂಟರ್
(ಹಿಂದಿನ ಕಿಂಡನ್ ಗಾರ್ಟನ್) ಬಲ್ಮಕೊ ಮುಂತಾದವುಗಳಿವೆ.
ಬೊಲ್ಯ ಮತ್ತು ಅಮ್ಮೆಂಬಳದಲ್ಲಿ ಶಾಲೆಗಳಿದ್ದವು. ಬೊಲ್ಮದಲ್ಲಿ ಶಾಲೆ ಮತ್ತು ದೇವಾಲಯ ಇದೆ. ಬೊಲ್ಮ 1840 ರಿಂದಲೇ ಇದ್ದ ಕೇಂದ್ರ. ಈ ಸ್ಥಳವು ಬಲ್ಮಟ್ಟ ಆಸ್ತಿ ದಾನ ಕೊಟ್ಟವರೇ ಈ ವಿಸ್ತಾರ ಆಸ್ತಿಯನ್ನು ದಾನ ನೀಡಿದ್ದಾರೆ. ಈ ಆಸ್ತಿಯ ಉದ್ದೇಶವೇನೆಂದರೆ ಇಲ್ಲಿ ಕೃಷಿ ಮಾಡಿಸಿ ಇದರ ಉತ್ಪನ್ನಗಳನ್ನು ಬಲ್ಮಠದಲ್ಲಿದ್ದ ಮಿಶನ್ ಕೇಂದ್ರದಲ್ಲಿ ಮಿಶನ್ ಭಂಡಾರಕ್ಕೆ ಸೇರಿಸಿಕೊಂಡು ಮಿಶನ್ ನೌಕರರಿಗೆ ವೇತನಕ್ಕಾಗಿ ಉಪಯೋಗಿಸಲಾಗುತ್ತಿತ್ತು. ಬೊಲ್ಮದಲ್ಲಿರುವ ಹೆಚ್ಚಿನ ಕ್ರೈಸ್ತರು ಮಿಶನ್ ಆಸ್ತಿಯಲ್ಲಿದ್ದು ಕೃಷಿಯನ್ನೂ ಮಾಡುತ್ತಿದ್ದಾರೆ. ಅಲ್ಲದೆ ಸುಮಾರು 40 ಕ್ರೈಸ್ತರಲ್ಲದ ಕುಟುಂಬದವರು ಮಿಶನ್ ಆಸ್ತಿಯಲ್ಲಿದ್ದಾರೆ. 1847ರಿಂದ 1864 ತನಕ ಬೊಲ್ಮ ಪರಿಸರದ ತಾರಿಪಾಡಿ, ಕಟ್ಟಪುಣಿ, ಪಲ್ಲ, ನಡುಮನೆ, ಚೇರಿಂದ ಗುತ್ತು, ಬೊಲ ಗುತ್ತು ಮುಂತಾದೆಡೆ ಬೇಸಾಯಕ್ಕೆ ಬೇಕಾದ ಸ್ಥಳಗಳನ್ನು ಪಡೆದುಕೊಂಡರು. ಈ ಸ್ಥಳಗಳಲ್ಲಿ ಅಲ್ಲಿದ್ದ ಕ್ರೈಸ್ತರಿಗೆ ಮತ್ತು ಮಂಗಳೂರಿನ ಕರೆದುಕೊಂಡು ಬಂದ ಕ್ರೈಸ್ತರಿಗೆ ಮತ್ತಿತರಿಗೆ ವಸತಿ ಬೇಸಾಯವನ್ನು ಬಾಡಿಗೆ ಗೇಣಿ ಮೂಲಕ ನೀಡಿ ಅಲ್ಲಿ ಬರುವ ಉತ್ಪತ್ತಿಗಳನ್ನು ಮಿಶನ್ ಪಡೆದುಕೊಂಡು ಸಭಾ ಭಂಡಾರಕ್ಕೆ ಉಪಯೋಗಿಸಿ ಕೊಳ್ಳುತ್ತಿತ್ತು. ಪ್ರಸ್ತುತ ಅಲ್ಲಿರುವ ಕುಟುಂಬಗಳು ಮಿಶನ್ ಆಸ್ತಿಯಲ್ಲಿ ವಾಸಿಸುತ್ತಿದ್ದು
ತುಳುನಾಡಿನಲ್ಲಿ ಪಾಸೆಲ್ ಮಿಶನ್ ಮತ್ತಿತರ ಲೇಖನಗಳು...
149