ಕಡಿಸಿ ಗದ್ದೆಗಳನ್ನಾಗಿ ಪರಿವರ್ತಿಸಿ ಬಾವಿಗಳನ್ನು ತೋಡಿಸಿ ಕೃಷಿ, ತೋಟಗಳನ್ನು
ಮಾಡಿಸಿ ಆ ಏದೆನ್ ತೋಟದಲ್ಲಿ ಆದಿ ಕ್ರೈಸ್ತ ಪರಿವಾರಗಳನ್ನು ನೆಲೆಯೂರಿಸಿದರು.
ಮುಡಾರು, ಸಾಣೂರು, ನಂದಳಿಕೆ, ಪರ್ಪಲೆ, ಅತ್ತೂರು, ಕಾರ್ಕಳ ಪೇಟೆ, ಕೆದಿಂಜೆ,
ಮೂಡಬಿದ್ರೆಯಲ್ಲಿ, ಅಜೆಕಾರು, ಕ್ರಿಸ್ತಪಲ್ಕೆ ಮುಂತಾದ ಕಡೆಗಳಲ್ಲಿ ನಿವೇಶನಗಳನ್ನು
ಖರೀದಿಸಿ ಸುವಾರ್ತಿಕರಿಗೆ, ಕ್ರೈಸ್ತರಿಗೆ ವಸತಿಗಳನ್ನು ನಿರ್ಮಿಸಲಾಯಿತು.
ಕ್ರೈಸ್ತಾವಲಂಬಿಗಳಾದ ಹಲವರು ತಾವಿದ್ದ ಮನೆಮಾರು, ಚಾಲಗೇಣಿ ಭೂಮಿಗಳನ್ನು
ಸಂಪೂರ್ಣ ತ್ಯಜಿಸಿ ಇದ್ದ ಕೆಲವು ಆಸ್ತಿಗಳನ್ನು ಮೈ ಸಾಲಕ್ಕೆ ವಜಾ ಮಾಡಿ ಬರಿದಾಗಿ
ಬಂದ ಕ್ರೈಸ್ತ ವಿಶ್ವಾಸಿಗಳಿಗೆ, ಸಂಕಷ್ಟದ ನಿವಾರಣೆಗೆ ವ್ಯವಸಾಯವೇ ತಾರಕ
ಮಂತ್ರವೆಂದು ಮನಗಂಡ ಮಿಶನರಿಗಳು ಬೇಸಾಯ ಕಸುಬಿಗೆ ಆದ್ಯತೆ ನೀಡಿ
ಕುಟುಂಬಗಳ ಜೀವನಕ್ಕೆ ಪ್ರೋತ್ಸಾಹ ಕೊಟ್ಟರು..
ಮಡಿಕೇರಿಗುಡ್ಡೆ ಪರಿಸರದಲ್ಲಿ 1890ರಿಂದಲೇ ಕ್ರೈಸ್ತ ಸಭೆ ಮತ್ತು ಶಿಕ್ಷಣದ ವ್ಯವಸ್ಥೆಗಾಗಿ ನಿವೇಶನಗಳನ್ನು ಖರೀದಿಸಲಾಗಿತ್ತು. ಇಲ್ಲಿ ಮೊದಲು ಶಾಲೆ ಪ್ರಾರಂಭವಾದದ್ದು 1892ರಲ್ಲಿ ಈ ಸ್ಥಳವು ಮುಖ್ಯ ರಸ್ತೆಯಿಂದ ದೇವಾಲಯಕ್ಕೆ ಹೋಗುವ ದಾರಿ ಪ್ರಾರಂಭವಾಗುವಲ್ಲಿಯೇ ಇತ್ತು ಇಲ್ಲಿ ಈಗ ಖಾಸಾಗಿ ವಸತಿ ಸಮುಚ್ಚಯವಿದೆ. ದೇವಾಲಯಕ್ಕೆ ಹೋಗುವ ದಾರಿಯ ಇಬ್ಬಾಗದಲ್ಲಿ, ಬೆಂದೂರು, ನಂತೂರು, ಮರೋಳಿ, ತಾರೆತೋಟ ಪ್ರದೇಶದಲ್ಲಿ ಮಿಶನ್ ಆಸ್ತಿಗಳಿದ್ದವು. ಪ್ರಸ್ತುತ ಸಂತ ಅಗ್ರೇಸ್ ಕಾಲೇಜಿನ ಸ್ನಾತಕೋತ್ತರ ವಿಭಾಗವಿರುವ ನಿವೇಶನ ಸೇರಿ ವಿಸ್ತಾರವಾದ ನಿವೇಶನಗಳಿತ್ತು. ಅದರಲ್ಲಿ ಮನೆಗಳನ್ನು ನಿರ್ಮಿಸಿ ಕ್ರೈಸ್ತರಿಗೆ ಬಾಡಿಗೆ ಗೇಣಿ ಮೂಲಕ ವಸತಿ ಸೌಕರ್ಯ ಕಲ್ಪಿಸಲಾಗಿತ್ತು. ಕಾಲಕ್ರಮೇಣ ಬಾಡಿಗೆ ಗೇಣಿಗಿದ್ದ ಕ್ರೈಸ್ತರು ಮಿಶನ್ ನಿವೇಶನಗಳನ್ನು ತಮ್ಮ ಹೆಸರಿಗೆ ಖಾತಾ ಬದಲಾವಣೆ ಮಾಡಿಕೊಂಡು ಇತರರಿಗೆ ಮಾರಿ ತಾವು ಬೇರೆ ಕಡೆ ವಾಸಿಸುತ್ತಿದ್ದಾರೆ. ಮಡಿಕೇರಿಗುಡ್ಡೆ, ತಾರೆತೋಟ ಪರಿಸರದಲ್ಲಿ ಬಾಸೆಲ್ ಮಿಶನ್ ಸಂಸ್ಥೆಗಳಲ್ಲಿ ದುಡಿಯುತ್ತಿದ್ದ ನೌಕರರಿಗೆ ಬಾಡಿಗೆ ಮನೆಗಳನ್ನು ನೀಡಲಾಗುತ್ತಿತ್ತು. ದೇಶೀಯ ಕ್ರೈಸ್ತರ ಸುಮಾರು 20ಕ್ಕೂ ಮಿಕ್ಕಿ ಮಗ್ಗಗಳಿತ್ತು. ಹಳೆ ದೇವಾಲಯದಲ್ಲಿ ಹಿಂದೆ ನೇಯಿಗೆ ಸಂಸ್ಥೆಯ ಉಪಕೇಂದ್ರವಿತ್ತು. ಈ ಪರಿಸರದಲ್ಲಿ 15 ಕುಟುಂಬಗಳವರು ಮಿಶನ್ ಆಸ್ತಿಯಲ್ಲಿದ್ದಾರೆ, ಮರೋಳಿ ಮಿಶನ್ ಕೌಂಪೌಂಡ್‌ನಲ್ಲಿ ಮಿಶನರಿಗಳು ಕುಷ್ಠರೋಗಿಗಳ ವಾಸ್ತವ್ಯ ಮತ್ತು ಚಿಕಿತ್ಸೆಗಾಗಿ ಕ್ಲಿನಿಕ್ ನಿರ್ಮಿಸಿದ್ದರು. ಹಲವಾರು ವರ್ಷಗಳ ಬಳಿಕ ರೋಗಿಗಳು ಚೊವ್ವಾಯೂರಿಗೆ ಸ್ಥಳಾಂತರ ಮಾಡಿದುದರಿಂದ ಈ ಸ್ಥಳವನ್ನು ಕ್ರೈಸ್ತ ವಸತಿಯನ್ನಾಗಿ ಮಾಡಿದುದರಿಂದ ಅಲ್ಲಿ ಈಗಲೂ ಸುಮಾರು 32
ತುಳುನಾಡಿನಲ್ಲಿ ಬಾಸೆಲ್ ಮಿಶನ್ ಮತ್ತಿತರ ಲೇಖನಗಳು...
151