Jump to content

Page:ತುಳುನಾಡಿನಲ್ಲಿ ಬಾಸೆಲ್ ಮಿಶನ್ ಮತ್ತಿತರ ಲೇಖನಗಳು.pdf/17

From Wikisource
This page has been validated.

ತುಳುನಾಡಿನ ಮೊದಲ ಮುದ್ರಣಾಲಯ

ಹತ್ತೊಂಬತ್ತನೇ ಶತಮಾನಕ್ಕಿಂತ ಮುಂಚಿನ ಪ್ರಾಚೀನ ಕನ್ನಡ ಸಾಹಿತ್ಯವು ತಾಳೆಗರಿ ಇಲ್ಲವೆ ಕಾಗದ ಪ್ರತಿಗಳಲ್ಲಿ ಬರೆದವುಗಳಾಗಿವೆ. ತಾಡವೋಲೆ ಅಥವಾ ಕಾಗದದ ಕೃತಿಗಳು ಬಹುತೇಕ ಖಾಸಗಿ ವಸ್ತು ಎನ್ನಿಸಿಕೊಳ್ಳುತ್ತಿದ್ದವು. ಯಾಕಂದರೆ ಅವು ಹೆಚ್ಚು ಪ್ರತಿಗಳೂ ಆಗುತ್ತಿರಲಿಲ್ಲ. ಅಲ್ಲದೆ ಹೆಚ್ಚು ಪ್ರಸಾರವೂ ಆಗುತ್ತಿರಲಿಲ್ಲ. ತದನಂತರ ಬಂದ ಅಚ್ಚಿನ ಮೊಳೆಗಳನ್ನು ಬಳಸಿ ಮುದ್ರಾಯಂತ್ರದಿಂದ ನೂರಾರು ಪ್ರತಿಗಳನ್ನು ಏಕಕಾಲಕ್ಕೆ ಮುದ್ರಿಸುವ ಸೌಕರ್ಯ ಲಭ್ಯವಾಯಿತು, ಆಗ ಅದು ಸಾರ್ವಜನಿಕ ಸ್ವತ್ತಾಗತೊಡಗಿತು. ಮುದ್ರಣ ವ್ಯವಸ್ಥೆಯು ನಮ್ಮ ನಾಡಿಗೆ ಇತ್ತೀಚೆಗೆ ಬಂದುದಾದರೂ ಮುದ್ರಣ ಕಲೆಯು ಚೀನಾ ದೇಶದಲ್ಲಿ ಬಹು ಹಿಂದಿನ ಕಾಲದಿಂದಲೂ ಇತ್ತು. ಕ್ರಿ.ಶ. 868ರಲ್ಲಿ ಮುದ್ರಿತಗೊಂಡ ಪುಸ್ತಕಗಳು ಲಭ್ಯವಿತ್ತು ಎನ್ನಲಾಗಿದೆ. ಬಿಡಿ ಅಕ್ಷರಗಳಿಂದ ಮುದ್ರಿಸುವುದನ್ನು ಪಿಶುಂಗನೆಂಬ ಚೀನಿಯನು ಕ್ರಿ.ಶ. ಹನ್ನೊಂದನೇ ಶತಮಾನದಲ್ಲಿಯೇ ಕೈಗೊಂಡಿದ್ದನು. ಈವರೆಗೆ ಸಿಕ್ಕಿದ ಸಂಪೂರ್ಣ ಮುದ್ರಿತ ಗ್ರಂಥಗಳಲ್ಲಿ ಅತೀ ಪುರಾತನವಾದುದೆಂದರೆ ಗುಟೆನ್‌ ಬರ್ಗ್ ಮುದ್ರಿಸಿದ ಬೈಬಲ್ ಎಂದು ಪ್ರಖ್ಯಾತಿ ಹೊಂದಿದೆ. 1764 ಪುಟಗಳಿರುವ ಈ ಬೃಹತ್ ಗ್ರಂಥ 1476ರಲ್ಲಿ ಪ್ರಕಟವಾಯಿತು. ಯುರೋಪಿನಲ್ಲಿ ಮಧ್ಯಯುಗದಲ್ಲಿ ಮುದ್ರಾಯಂತ್ರ ರೂಪಿಸಲ್ಪಟ್ಟಿತು. ಗುಟೆರ್ನ್‌ಬರ್ಗ್ ಎಂಬವರು ಬಿಡಿ ಮೊಳೆಗಳನ್ನು ತಯಾರಿಸತೊಡಗಿದ್ದರಿಂದ ಮುದ್ರಣ ಕಾರ್ಯ ವ್ಯವಸ್ಥಿತವಾಗಿ ನೆಲೆಗೊಂಡಿತ್ತಲ್ಲದೆ ಗ್ರಂಥ ಪ್ರಸರಣೆ ಭರದಿಂದ ಹೆಚ್ಚಿತು. ಆದರೆ ಅವೆಲ್ಲವೂ ರೋಮನ್ ಲಿಪಿಯಲ್ಲಿ ನಡೆಯಿತು. ನಂತರ ಯುರೋಪ್‌ನ ಭಾಷೆಗಳೆಲ್ಲವೂ ಅದರ ಪ್ರಯೋಜನ ಪಡೆದವು.

ಕ್ರೈಸ್ತ ಮತ ಪ್ರಚಾರಕ್ಕಾಗಿ ಪೋರ್ಚುಗೀಸ್, ಇಂಗ್ಲೆಂಡ್, ಇಟಲಿ ಮೊದಲಾದ ದೇಶಗಳಿಂದ ಮತ ಪ್ರಚಾರಕರು ಇವೆ. 16ನೇ ಶತಮಾನದಷ್ಟು ಹಿಂದಿನಿಂದಲೂ ಭಾರತಕ್ಕೆ ಬರುತ್ತಿದ್ದರು. ಭಾರತದ ಎಲ್ಲಾ ಭಾಷೆಗಳಲ್ಲಿ ಮುದ್ರಣ ವ್ಯವಸ್ಥೆಯನ್ನು ಮಾಡಿಕೊಟ್ಟವರು ಇವರೇ ಎನ್ನಬಹುದು. ಭಾಷಾ ಶಾಸ್ತ್ರವನ್ನು ಕ್ರಮವಾಗಿ ಇಲ್ಲಿ ಬೆಳೆಸಿದವರೂ ಇವರೇ, ಭಾರತೀಯ ವಿವಿಧ ಭಾಷೆಗಳನ್ನು

ತುಳುನಾಡಿನಲ್ಲಿ ಬಾಸೆಲ್ ಮಿಶನ್ ಮತ್ತಿತರ ಲೇಖನಗಳು..
05